ಮತ್ತೆ ಮರಳಿದ ರೋʼಹಿಟ್ʼ ಶರ್ಮಾ, ಆಕರ್ಷಕ ಶತಕ
ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದ ರೋಹಿತ್
PHOTO : cricketworldcup.com
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ 9ನೇ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತದ ವಿಶ್ವಕಪ್ ಮೂಡ್ ಬದಲಿಸಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಫ್ಘಾನಿಸ್ತಾನ ವಿರುದ್ಧ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಕಪಿಲ್ ದೇವ್ ಅವರಂತಹ ದಿಗ್ಗಜರ ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಈ ಶತಕದೊಂದಿಗೆ, ರೋಹಿತ್ ಶರ್ಮಾ ಐಸಿಸಿ ವಿಶ್ವಕಪ್ನಲ್ಲಿ 7 ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ಅವರ ಮೂರನೇ ಸಿಕ್ಸರ್ನೊಂದಿಗೆ, ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿನ ಗಳಿಸಿದ ಸಿಕ್ಸರ್ಗಳ ಸಂಖ್ಯೆಯನ್ನು 554 ಕ್ಕೆ ಏರಿಸಿದರು. ಹಿಂದಿನ ದಾಖಲೆಯನ್ನು ಕ್ರಿಸ್ ಗೇಲ್ ಹೊಂದಿದ್ದರು, ಅವರು 551 ಅಂತರಾಷ್ಟ್ರೀಯ ಇನ್ನಿಂಗ್ಸ್ಗಳಲ್ಲಿ 553 ಸಿಕ್ಸರ್ಗಳನ್ನು ಸಿಡಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ ಚೆಪಾಕ್ ಸ್ಟೇಡಿಯಂ ನಲ್ಲಿ ಶೂನ್ಯ ಕ್ಕೆ ಹೇಝಲ್ವುಡ್ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದಿದ್ದ ರೋಹಿತ್ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದರು. ಆದರೆ ಇಂದು ದೆಹಲಿಯ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಅವರ ಆಟ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಹುರುಪು ನೀಡಿದೆ.
64 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ನೊಂದಿಗೆ 101 ರನ್ ಗಳಿಸಿರುವ ರೋಹಿತ್ ಶತಕ ಬಾರಿಸಿದ್ದಾರೆ. 2 ನೇ ಕ್ರಮಾಂಕದ ಆಟಗಾರ ಇಶಾನ್ ಕಿಶನ್ 46 ಎಸೆತಗಳಲ್ಲಿ 5 ಬೌಂಡರಿ 2 ಸಿಕ್ಸರ್ ಜೊತೆಗೆ 47 ರನ್ ಗಳಿಸಿ ಔಟ್ ಆದರು.
ಅಫ್ಘಾನಿಸ್ತಾನ ನೀಡಿರುವ 273 ರನ್ ಗುರಿ ಬೆನ್ನತ್ತಿರುವ ಭಾರತಕ್ಕೆ 31.2 ಓವರ್ ಗಳಲ್ಲಿ 117 ರನ್ ಗಳ ಅವ್ಯಶಕತೆಯಿದೆ.