ಪುಣೆಯಲ್ಲಿ ನೂರರ ಗಡಿ ದಾಟಿದ ಭಾರತ, ರೋಹಿತ್ ಶರ್ಮಾ ಔಟ್
ವಿಶ್ವಕಪ್ : ಬಾಂಗ್ಲಾ ವಿರುದ್ಧದ ಪಂದ್ಯ
PHOTO : Cricketworldcup.com
ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಬಾಂಗ್ಲಾದೇಶದ ವಿರುದ್ದ ಭಾರತ 100 ರನ್ ಗಡಿ ದಾಟಿದೆ.
ಬಾಂಗ್ಲಾ ನೀಡಿದ 257 ರನ್ ಬೆನ್ನತ್ತಿದ ಭಾರತ ಪರ ಹಿಟ್ ಮ್ಯಾನ್ ರೊಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರು. ಪ್ರಾರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರೋಹಿತ್ ಬಾಂಗ್ಲಾ ಬೌಲರ್ ಗಳ ಮೇಲೆ ಒತ್ತಡ ತಂದರು. 40 ಎಸೆತ ಎದುರಿಸಿದ ರೋಹಿತ್ 7 ಬೌಂಡರಿ 2 ಸಿಕ್ಸರ್ ಸಹಿತ 48 ಗಳಸಿ 120 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದರು. ಆದರೆ ಹಸನ್ ಮಹ್ಮೂದ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರು. ಅವರಿಗೆ ಸಾಥ್ ನೀಡಿದ್ದ ಶುಭಮನ್ ಗಿಲ್ ಹಿಂದೆ ಬೀಳದೆ, ಬಾಂಗ್ಲಾ ಬೌಲರ್ ಗಳನ್ನು ದಂಡಿಸಿ 5 ಬೌಂಡರಿ 2 ಸಿಕ್ಸರ್ 41 ರನ್ ಪೇರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ವಿರಾಟ್ ಕೊಹ್ಲಿ 15 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಭಾರತದ ಗೆಲುವಿಗೆ 35.5 ಓವರ್ಗಳಲ್ಲಿ 147 ರನ್ ಅಗತ್ಯವಿದೆ.