ಪ್ಯಾರಾಲಿಂಪಿಕ್ಸ್ | 10 ಮೀ. ಏರ್ ರೈಫಲ್ ನಲ್ಲಿ ಕಂಚು ಗೆದ್ದ ರುಬಿನಾ ಫ್ರಾನ್ಸಿಸ್
ಶೂಟಿಂಗ್ನಲ್ಲಿ ಭಾರತಕ್ಕೆ ನಾಲ್ಕನೇ ಪದಕ
ರುಬಿನಾ ಫ್ರಾನ್ಸಿಸ್ | PC : X
ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಶನಿವಾರ ನಡೆದ ಏರ್ ರೈಫಲ್ ಮಹಿಳೆಯರ 10 ಮೀ. SH1 ಸ್ಪರ್ಧೆಯ ಫೈನಲ್ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ ಕಂಚಿನ ಪದಕ ಗೆದ್ದರು.
ಮಹಿಳೆಯರ ಫೈನಲ್ನಲ್ಲಿ ರುಬಿನಾ ಒಟ್ಟು 211.1 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಹಿಂದಿನ ದಿನದ ಅರ್ಹತಾ ಸುತ್ತಿನಲ್ಲಿ ಅವರು ಏಳನೇ ಸ್ಥಾನದಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದರು.
ಇದು ಶೂಟಿಂಗ್ನಲ್ಲಿ ಭಾರತದ ನಾಲ್ಕನೇ ಪದಕ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಒಟ್ಟಾರೆ ಐದನೇ ಪದಕವಾಗಿದೆ.
ಶುಕ್ರವಾರ, ಅವನಿ ಲೆಖರಾ ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಗೆದ್ದಿದ್ದ ಮಹಿಳೆಯರ 10 ಮೀಟರ್ ಏರ್ ರೈಫಲ್ ಚಿನ್ನದ ಪದಕದ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಅದೇ ಸ್ಪರ್ಧಯಲ್ಲಿ ಆದ ಮೋನಾ ಅಗರ್ವಾಲ್ ಕಂಚಿನ ಪದಕ ಪಡೆದರು.
ಪುರುಷರ 10 ಮೀಟರ್ ಏರ್ ರೈಫಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕವನ್ನು ಸೇರಿಸಿದರು.
Next Story