ಮಹಿಳೆಯರ ಮ್ಯಾರಥಾನ್ | ವಿಶ್ವ ದಾಖಲೆ ಮುರಿದ ಕೆನ್ಯಾದ ರುತ್ ಚೆಪನ್ಗೆಟಿಚ್
Photo : X / @WorldAthletics
ನ್ಯೂಯಾರ್ಕ್ : ಕೆನ್ಯಾದ ರುತ್ ಚೆಪನ್ಗೆಟಿಚ್ ಅವರು ರವಿವಾರ ಚಿಕಾಗೊದಲ್ಲಿ ಮಹಿಳೆಯರ ಮ್ಯಾರಥಾನ್ ನಲ್ಲಿ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಬಿರುಸಿನ ಆರಂಭ ಪಡೆದಿದ್ದ ಚೆಪನ್ಗೆಟಿಚ್ ತನ್ನ ಸ್ಪರ್ಧಿಗಳನ್ನು ಹಿಂದಿಕ್ಕಿ ಎರಡು ಗಂಟೆ, 9 ನಿಮಿಷ, 57 ಸೆಕೆಂಡ್ನಲ್ಲಿ ಗುರಿ ತಲುಪಿ ಚಿಕಾಗೊದಲ್ಲಿ ತನ್ನ ಮೂರನೇ ಪ್ರಶಸ್ತಿಯನ್ನು ಜಯಿಸಿದರು. ಕಳೆದ ವರ್ಷ ಬರ್ಲಿನ್ನಲ್ಲಿ ಇಥಿಯೋಪಿಯದ ಟಿಗ್ಸ್ ಅಸೆಫಾಸ್ ನಿರ್ಮಿಸಿದ್ದ ದಾಖಲೆಯನ್ನು(2:11.53) ಚೆಪನ್ಗೆಟಿಚ್ ಮುರಿದರು.
Next Story