ಮಂಡಿ ಗಾಯ | ಆಸ್ಟ್ರೇಲಿಯ ವಿರುದ್ಧದ ಯುವ ಟೆಸ್ಟ್ ಸರಣಿಯಿಂದ ಸಮಿತ್ ದ್ರಾವಿಡ್ ಹೊರಗೆ
ಸಮಿತ್ ದ್ರಾವಿಡ್ | PC : NDTV
ಮುಂಬೈ : ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಎರಡು ಪಂದ್ಯಗಳ ಅಂಡರ್-19 ಯುವ ಟೆಸ್ಟ್ ಸರಣಿಯನ್ನು ಭಾರತದ ಸಮಿತ್ ದ್ರಾವಿಡ್ ಕಳೆದುಕೊಳ್ಳಲಿದ್ದಾರೆ.
ಸರಣಿಯ ಮೊದಲ ಪಂದ್ಯವು ಚೆನ್ನೈನ ಎಮ್.ಎ. ಚಿದಂಬರಮ್ ಸ್ಟೇಡಿಯಮ್ನಲ್ಲಿ ಸೋಮವಾರ ಆರಂಭಗೊಂಡಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ರಾಹುಲ್ ದ್ರಾವಿಡ್ರ ಮಗನಾಗಿರುವ ಸಮಿತ್ ಈಗ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಮಂಡಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮಂಡಿ ಗಾಯದಿಂದಾಗಿ ಅವರು ಆಸ್ಟ್ರೇಲಿಯ ವಿರುದ್ಧದ ಮೂರು ಪಂದ್ಯಗಳ ಯುವ ಏಕದಿನ ಸರಣಿಯಿಂದಲೂ ಹೊರಗಿದ್ದರು.
ಯುವ ಏಕದಿನ ಪಂದ್ಯವನ್ನು ಭಾರತವು 3-0 ಅಂತರದಿಂದ ಕ್ಲೀನ್ಸ್ವೀಪ್ ಮಾಡಿದೆ.
Next Story