ಟೆಸ್ಟ್ ಕ್ರಿಕೆಟನ್ನು ಉಳಿಸಿ: ಐಸಿಸಿಗೆ ಬ್ರಿಯಾನ್ ಲಾರಾ ಮನವಿ
ಬ್ರಿಯಾನ್ ಲಾರಾ | PC : X
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ನ ಮಹತ್ವವನ್ನು ಗಮನಾರ್ಹವಾಗಿ ಅತಿಕ್ರಮಿಸಿರುವ ಫ್ರಾಂಚೈಸಿ ಮೂಲದ ಟಿ20 ಲೀಗ್ಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಹತ್ತಿಕ್ಕಲು ಆಡಳಿತ ಮಂಡಳಿಯು ಮಧ್ಯಪ್ರವೇಶಿಸಬೇಕು. ಅದಕ್ಕಾಗಿ ಸೂತ್ರವೊಂದನ್ನು ಸಿದ್ಧಪಡಿಸಬೇಕು ಎಂದು ವೆಸ್ಟ್ಇಂಡೀಸ್ ಕ್ರಿಕೆಟ್ ದಂತಕತೆ ಬ್ರಿಯಾನ್ ಲಾರಾ ಅವರು ಐಸಿಸಿಯನ್ನು ವಿನಂತಿಸಿದ್ದಾರೆ.
ದಕ್ಷಿಣ ಆಫ್ರಿಕಾ ತನ್ನ ದೇಶೀಯ ಟಿ20 ಟೂರ್ನಿ ನಿಗದಿಯಾಗಿರುವ ಕಾರಣಕ್ಕೆ ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗೆ ದುರ್ಬಲ ತಂಡವನ್ನು ಕಣಕ್ಕಿಳಿಸಿತ್ತು. ಇದು ಟೆಸ್ಟ್ ಕ್ರಿಕೆಟ್ ಎದುರಿಸುತ್ತಿರುವ ಸವಾಲನ್ನು ಪ್ರತಿಬಿಂಬಿಸುತ್ತಿತ್ತು.
ಈ ಸನ್ನಿವೇಶವು ಚುಟುಕು ಮಾದರಿಯ ಪಂದ್ಯಾವಳಿಗಳ ಹೆಚ್ಚಳವಾಗುತ್ತಿರುವ ಮಧ್ಯೆ ಟೆಸ್ಟ್ ಕ್ರಿಕೆಟ್ನ ಪ್ರಸ್ತುತತೆ ಹಾಗೂ ಆದ್ಯತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕಿದೆ.
ಐಸಿಸಿ ಈ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಫ್ರಾಂಚೈಸಿ ಕ್ರಿಕೆಟ್ ತೆಗೆದುಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಚಿಂತಕರು ಟೆಸ್ಟ್ ಕ್ರಿಕೆಟ್ ಸಾಂದರ್ಭಿಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಾರ್ಗ ಕಂಡುಕೊಳ್ಳಬಹುದು ಎಂದು ಭಾವಿಸುತ್ತೇನೆ. ನಾನು ಟೆಸ್ಟ್ ಚಾಂಪಿಯನ್ ಶಿಪನ್ನು ಇಷ್ಟಪಡುತ್ತೇನೆ. ಟೆಸ್ಟ್ ಕ್ರಿಕೆಟ್ ಸಾಂದರ್ಭಿಕವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಪಿಟಿಐಗೆ ತಿಳಿಸಿದ್ದಾರೆ.