ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್ | ಇಂಗ್ಲೆಂಡ್ ತಂಡಕ್ಕೆ ಆ್ಯಂಡರ್ಸನ್ ಬದಲಿಗೆ ಮಾರ್ಕ್ ವುಡ್

ಮಾರ್ಕ್ ವುಡ್ | (Credits: X)
ಲಂಡನ್: ಮುಂದಿನ ವಾರ ಟ್ರೆಂಟ್ಬ್ರಿಡ್ಜ್ ನಲ್ಲಿ ಆರಂಭವಾಗಲಿರುವ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಜೇಮ್ಸ್ ಆ್ಯಂಡರ್ಸನ್ ಬದಲಿಗೆ ವೇಗದ ಬೌಲರ್ ಮಾರ್ಕ್ ವುಡ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ಶನಿವಾರ ಈ ಘೋಷಣೆ ಮಾಡಿದೆ.
41ರ ಹರೆಯದ ಆ್ಯಂಡರ್ಸನ್ ಶುಕ್ರವಾರ ತನ್ನ 188ನೇ ಟೆಸ್ಟ್ ಪಂದ್ಯವನ್ನು ಆಡಿದ ನಿವೃತ್ತಿಯಾಗಿದ್ದಾರೆ. ಆ್ಯಂಡರ್ಸನ್ ತನ್ನ 21 ವರ್ಷಗಳ ವೃತ್ತಿಜೀವನದಲ್ಲಿ 704 ವಿಕೆಟ್ ಗಳನ್ನು ಉರುಳಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ವಿಶ್ವದ 3ನೇ ಬೌಲರ ಆಗಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ತಂಡವು ಲಾರ್ಡ್ಸ್ ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಇನಿಂಗ್ಸ್ ಹಾಗೂ 114 ರನ್ನಿಂದ ಜಯ ಸಾಧಿಸಿತ್ತು.
34ರ ಹರೆಯದ ವುಡ್ ಇಂಗ್ಲೆಂಡ್ ತಂಡವನ್ನು 34 ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಈ ವೇಳೆ ಅವರು 108 ವಿಕೆಟ್ಗಳನ್ನು ಪಡೆದಿದ್ದರು. ಮಾರ್ಚ್ನಲ್ಲಿ ಭಾರತ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ಆಡಿದ್ದರು.
ಎರಡನೇ ಟೆಸ್ಟ್ ಪಂದ್ಯವು ಗುರುವಾರ ಆರಂಭವಾಗಲಿದೆ. ಸರಣಿಯ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಜುಲೈ 26ರಿಂದ ಬರ್ಮಿಂಗ್ಹ್ಯಾಮ್ನಲ್ಲಿ ಆರಂಭವಾಗಲಿದೆ.
ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡ: ಬೆನ್ ಸ್ಟೋಕ್ಸ್(ನಾಯಕ), ಗಸ್ ಅಟ್ಕಿನ್ಸನ್, ಶುಐಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾವ್ಲೆ, ಬೆನ್ ಡಕೆಟ್, ಡ್ಯಾನ್ ಲಾರೆನ್ಸ್, ಡಿಲ್ಲೊನ್ ಫೆನ್ನಿಂಗ್ಟನ್, ಒಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜಮ್ಮಿ ಸ್ಮಿತ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.