ಬಿಳಿ ಚೆಂಡಿನ ಕ್ರಿಕೆಟ್ನಿಂದ ಶೆಲ್ಡನ್ ಜಾಕ್ಸನ್ ನಿವೃತ್ತಿ
ಶೆಲ್ಡನ್ ಜಾಕ್ಸನ್ | PC : X
ಮುಂಬೈ, ಜ.3: ಸೌರಾಷ್ಟ್ರದ ಹಿರಿಯ ವಿಕೆಟ್ಕೀಪರ್-ಬ್ಯಾಟರ್ ಶೆಲ್ಡನ್ ಜಾಕ್ಸನ್ ಅವರು ಬಿಳಿ ಚೆಂಡಿನ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಕೆಂಪು ಚೆಂಡಿನ ಕ್ರಿಕೆಟ್ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.
86 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಜಾಕ್ಸನ್ ಅವರು 9 ಶತಕ ಹಾಗೂ 14 ಅರ್ಧಶತಕಗಳ ಸಹಿತ 2,792 ರನ್ ಗಳಿಸಿದ್ದಾರೆ. 2022-23ರ ಋತುವಿನಲ್ಲಿ ಸೌರಾಷ್ಟ್ರ ತಂಡವು ವಿಜಯ್ ಹಝಾರೆ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಟಿ-20 ಕ್ರಿಕೆಟ್ನಲ್ಲಿ 84 ಪಂದ್ಯಗಳಲ್ಲಿ ಒಂದು ಶತಕ ಹಾಗೂ 11 ಅರ್ಧಶತಕಗಳ ಸಹಿತ 1,812 ರನ್ ಗಳಿಸಿದ್ದಾರೆ.
Next Story