ಶುಭಮನ್ ಗಿಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ ಗುಜರಾತ್ ಟೈಟನ್ಸ್
ಹಾರ್ದಿಕ್ ಪಾಂಡ್ಯಾ ಅವರ ಮುಂಬೈ ಇಂಡಿಯನ್ಸ್ ಗೆ ಮರಳುವ ನಿರ್ಧಾರವನ್ನು ಗೌರವಿಸುತ್ತೇವೆ ಎಂದ ತಂಡ
ಶುಭಮನ್ ಗಿಲ್ | Photo: @ShubmanGill | X
ನವದೆಹಲಿ (ಪಿಟಿಐ): ಮುಂಬೈ ಇಂಡಿಯನ್ಸ್ಗೆ ಮರಳುವ ಹಾರ್ದಿಕ್ ಪಾಂಡ್ಯ ಅವರ ನಿರ್ಧಾರದ ನಂತರ ಗುಜರಾತ್ ಟೈಟಾನ್ಸ್ ಸೋಮವಾರ ಇಂಡಿಯನ್ ಪ್ರೀಮಿಯರ್ ಲೀಗ್ ನ (ಐಪಿಎಲ್) 2024 ರ ಸೀಸನ್ ಗೆ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಿದೆ.
ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ನಿಂದ 15 ಕೋಟಿ ರೂಪಾಯಿಗಳನ್ನು ಆಟಗಾರನ ಬದಲಾವಣೆಯ ವ್ಯಾಪಾರದ ಒಪ್ಪಂದಕ್ಕೆ ಪಡೆಯುತ್ತದೆ. ಜೊತೆಗೆ ಬಹಿರಂಗಪಡಿಸದ ದೊಡ್ಡ ಮೊತ್ತವನ್ನು ವರ್ಗಾವಣೆ ಶುಲ್ಕ ಹೊರತುಪಡಿಸಿ, ಒಂದು ಭಾಗ ಕ್ರಿಕೆಟಿಗನಿಗೆ ನೀಡಲಿದೆ.
ಪಾಂಡ್ಯ ಅವರ ನಿರ್ಗಮನ ಖಚಿತವಾದ ನಂತರ, 24 ವರ್ಷದ ಆರಂಭಿಕ ಆಟಗಾರ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಕಳೆದ ಋತುವಿನಲ್ಲಿ 890 ರನ್ಗಳೊಂದಿಗೆ 'ಕಿತ್ತಳೆ ಕ್ಯಾಪ್' ಪಡೆದಿದ್ದರು. ಇದು ವಿರಾಟ್ ಕೊಹ್ಲಿ ಅವರ ಸಾರ್ವಕಾಲಿಕ ದಾಖಲೆಯಾದ 973 ರನ್ ಗಳ ನಂತರದ ಸ್ಥಾನದಲ್ಲಿದೆ.
"ಗುಜರಾತ್ ಟೈಟಾನ್ಸ್ ನ ನಾಯಕತ್ವವನ್ನು ವಹಿಸಿಕೊಳ್ಳಲು ನನಗೆ ಸಂತೋಷವಾಗಿದೆ ಮತ್ತು ಅಂತಹ ಉತ್ತಮ ತಂಡವನ್ನು ಮುನ್ನಡೆಸಲು ನನ್ನ ಮೇಲಿನ ನಂಬಿಕೆಗಾಗಿ ಫ್ರಾಂಚೈಸಿಗೆ ಧನ್ಯವಾದ ಹೇಳುತ್ತೇನೆ. ನಾವು ಎರಡು ಅಸಾಧಾರಣ ಋತುಗಳನ್ನು ಹೊಂದಿದ್ದೇವೆ ಮತ್ತು ನಮ್ಮ ಉತ್ತೇಜಕ ಬ್ರ್ಯಾಂಡ್ ಕ್ರಿಕೆಟ್ನೊಂದಿಗೆ ತಂಡವನ್ನು ಮುನ್ನಡೆಸಲು ನಾನು ಉತ್ಸುಕನಾಗಿದ್ದೇನೆ. ," ಗಿಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಮುಖ್ಯಸ್ಥ ವಿಕ್ರಮ್ ಸೋಲಂಕಿ ಅವರು ಕಳೆದ ಎರಡು ಋತುಗಳಲ್ಲಿ ತಂಡದ ಯಶಸ್ಸಿಗೆ ಪಾಂಡ್ಯ ಕಾರಾಣ ಎಂದು ಅವರ ಕೊಡುಗೆಯನ್ನು ಉಲ್ಲೇಖಿಸಿದ್ದಾರೆ.
"ಗುಜರಾತ್ ಟೈಟಾನ್ಸ್ ಮೊದಲ ನಾಯಕನಾಗಿ, ಹಾರ್ದಿಕ್ ಪಾಂಡ್ಯ ಫ್ರಾಂಚೈಸಿಗೆ ಎರಡು ಅದ್ಭುತ ಸೀಸನ್ಗಳನ್ನು ನೀಡಲು ಸಹಾಯ ಮಾಡಿದ್ದಾರೆ. ಇದರ ಪರಿಣಾಮವಾಗಿ ಒಂದು ಐಪಿಎಲ್ ಚಾಂಪಿಯನ್ಶಿಪ್ ಗೆಲ್ಲಲು ಮತ್ತು ಇನೊಮ್ಮೆ ಫೈನಲ್ ನಲ್ಲಿ ಸ್ಥಾನ ಪಡೆಯಲು ಕಾರಣವಾಯಿತು" ಎಂದು ಸೋಲಂಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅವರು ಈಗ ತಮ್ಮ ಮೂಲ ತಂಡ ಮುಂಬೈ ಇಂಡಿಯನ್ಸ್ಗೆ ಮರಳುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಶುಭ ಹಾರೈಸುತ್ತೇವೆ," ಎಂದು ಇಂಗ್ಲೆಂಡ್ ತಂಡದ ಮಾಜಿ ಬ್ಯಾಟರ್ ಸೋಲಂಕಿ ಹೇಳಿದ್ದಾರೆ.
ಗಿಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಸೋಲಂಕಿ, ಗಿಲ್ ಅವರ ಪ್ರಬುದ್ಧತೆ ತಂಡಕ್ಕೆ ಸಹಕರಿಸಲಿದೆ ಎಂದರು.
"ಶುಭಮನ್ ಗಿಲ್ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಅವರು ಕ್ರಿಕೆಟ್ ನ ಉತ್ತುಂಗದಲ್ಲಿದ್ದಾರೆ. ಅವರು ಬ್ಯಾಟರ್ ಆಗಿ ಮಾತ್ರವಲ್ಲದೆ ಕ್ರಿಕೆಟ್ ನಲ್ಲಿ ನಾಯಕರಾಗಿಯೂ ಪ್ರಬುದ್ಧರಾಗಿರುವುದನ್ನು ನಾವು ನೋಡಿದ್ದೇವೆ" ಎಂದು ಸೋಲಂಕಿ ಅಭಿಪ್ರಾಯಪಟ್ಟಿದ್ದಾರೆ.
"ಅವರ ಪರಿಪಕ್ವತೆ ಮತ್ತು ಕೌಶಲ್ಯವು ಮೈದಾನದಲ್ಲಿನ ಅವರ ಪ್ರದರ್ಶನದಲ್ಲಿ ಸ್ಪಷ್ಟವಾಗಿದೆ. ಶುಭಮನ್ ಅವರಂತಹ ಯುವ ಆಟಗಾರ, ನಾಯಕನ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ" ಎಂದು ಜಿಟಿ ಥಿಂಕ್-ಟ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.