ಧೀರಜ್ ಬೊಮ್ಮದೇವರಗೆ ಬೆಳ್ಳಿ ; ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಅರ್ಹತೆ
ಆರ್ಚರಿ ಕಾಂಟಿನೆಂಟಲ್ ಕ್ವಾಲಿಫೈಯಿಂಗ್ ಟೂರ್ನಮೆಂಟ್
Indian archer Dhiraj Bommadevara (X)
ಬ್ಯಾಂಕಾಕ್: ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ಆರ್ಚರಿ ಕಾಂಟಿನೆಂಟಲ್ ಕ್ವಾಲಿಫೈಯಿಂಗ್ ಟೂರ್ನಮೆಂಟ್ನಲ್ಲಿ ಭಾರತದ ಧೀರಜ್ ಬೊಮ್ಮದೇವರ ಶನಿವಾರ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ ರಿಕರ್ವ್ ವಿಭಾಗದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. ಇದು ಒಲಿಂಪಿಕ್ಸ್ನ ಬಿಲ್ಗಾರಿಕೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಲಭಿಸಿದ ಮೊದಲ ಸ್ಥಾನವಾಗಿದೆ.
ಶನಿವಾರ ನಡೆದ ಸೆಮಿಫೈನಲ್ನಲ್ಲಿ ಅವರು ಇರಾನ್ನ ಮುಹಮ್ಮದ್ ಹುಸೈನ್ ಗುಲ್ಶನಿಯನ್ನು 6-0 ಅಂಕಗಳಿಂದ ಸೋಲಿಸಿದರು.
ಆದರೆ, ಫೈನಲ್ನಲ್ಲಿ ಅವರು ಚೈನೀಸ್ ತೈಪೆಯ ಝಿಹ್ ಸಿಯಾಂಗ್ ವಿರುದ್ಧ ಶೂಟ್ಆಫ್ನಲ್ಲಿ 5-6 (9-10) ಅಂಕಗಳಿಂದ ಸೋತು ಬೆಳ್ಳಿಗೆ ತೃಪ್ತಿ ಪಡೆದರು.
ಕಣದಲ್ಲಿದ್ದ ಇತರ ಭಾರತೀಯರಾದ ತರುಣ್ದೀಪ್ ರೈ ಮತ್ತು ಅಂಕಿತಾ ಭಕತ್ ಸೆಮಿಫೈನಲ್ ತಲುಪಲು ವಿಫಲರಾದರು
Next Story