ಐಸಿಸಿಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಮಾನತು
Photo: cricket.com
ದುಬೈ : ಶ್ರೀಲಂಕಾ ಕ್ರಿಕೆಟ್ನ ಸದಸ್ಯತ್ವವನ್ನು ತಕ್ಷಣವೇ ಜಾರಿಗೆ ಬರುವಂತೆ ಐಸಿಸಿ ಅಮಾನತುಗೊಳಿಸಿದೆ.
ಕ್ರಿಕೆಟ್ ಆಡಳಿತದಲ್ಲಿ ಸರ್ಕಾರದ ಹಸ್ತಕ್ಷೇಪ ಉಲ್ಲೇಖಿಸಿರುವ ಐಸಿಸಿ, ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಘೋಷಿಸಿದೆ.
ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ಬಳಿಕ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಯನ್ನು ವಜಾ ಮಾಡಿತ್ತು. ಬಳಿಕ ಅರ್ಜುನ್ ರಣತುಂಗ ನೇತೃತ್ವದಲ್ಲಿ ತಾತ್ಕಾಲಿಕ ಮಂಡಳಿ ನೇಮಿಸಿದ್ದ ಸರ್ಕಾರ, ಏಳು ಸದಸ್ಯರ ಸಮಿತಿಯಲ್ಲಿ ಸುಪ್ರೀಂಕೋರ್ಟ್ ನ ಇಬ್ಬರು ನಿವೃತ್ತ ನ್ಯಾಯಾಧೀಶರನ್ನೂ ಸೇರಿಸಿತ್ತು.
ಶ್ರೀಲಂಕಾವು ವಿಶ್ವಕಪ್ ಟೂರ್ನಿಯಲ್ಲಿ ಸೆಮಿ ಫೈನಲ್ ಸ್ಪರ್ಧೆಯಿಂದ ಹೊರ ಬಿದ್ದಿದೆ. ಆತಿಥೇಯ ಭಾರತ ವಿರುದ್ಧ ಶ್ರೀಲಂಕಾ ತಂಡ 302 ರನ್ ಅಂತರದಿಂದ ಹೀನಾಯವಾಗಿ ಸೋತ ನಂತರ ಕೋಪಗೊಂಡಿದ್ದ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಮಂಡಳಿಯನ್ನು ತೀವ್ರವಾಗಿ ಟೀಕಿಸಿದ್ದರು.
ಆಡಳಿತ ಮಂಡಳಿಯಾದ ಶ್ರೀಲಂಕಾ ಕ್ರಿಕೆಟ್ ಅನ್ನು ದೇಶದ್ರೋಹಿ ಹಾಗೂ ಭ್ರಷ್ಟ ಎಂದು ಹೇಳಿಕೆಯೊಂದರಲ್ಲಿ ಕರೆದಿದ್ದ ಕ್ರೀಡಾ ಸಚಿವ ರೋಶನ್ ರಣಸಿಂಗ್, ಕ್ರಿಕೆಟ್ ಮಂಡಳಿಯ ಸದಸ್ಯರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದರು.
Suspension Notice: The International Cricket Council (ICC) Board has suspended Sri Lanka Cricket’s membership of the ICC with immediate effect.
— Sri Lanka Cricket (@OfficialSLC) November 10, 2023
READ https://t.co/rvcmdOY3HR #SLC #LKA