ಸುಲ್ತಾನ್ ಜೊಹೊರ್ ಕಪ್ ಹಾಕಿ: ಭಾರತದ ಜೂನಿಯರ್ ತಂಡಕ್ಕೆ ಪಾಕಿಸ್ತಾನ ಎದುರಾಳಿ
Photo: HI Media
ಹೊಸದಿಲ್ಲಿ : ಈ ವರ್ಷಾರಂಭದಲ್ಲಿ ಪುರುಷರ ಜೂನಿಯರ್ ಏಶ್ಯಕಪ್ನಲ್ಲಿ ಪ್ರಶಸ್ತಿ ಜಯಿಸಿದ್ದ ಭಾರತದ ಜೂನಿಯರ್ ಹಾಕಿ ತಂಡ ಜೊಹೊರ್ನಲ್ಲಿ ಶುಕ್ರವಾರ ನಡೆಯಲಿರುವ ಸುಲ್ತಾನ್ ಆಫ್ ಜೊಹೊರ್ ಕಪ್ನ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತವು ಮಲೇಶ್ಯ, ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ತಂಡಗಳೊಂದಿಗೆ ಬಿ ಗುಂಪಿನಲ್ಲಿದೆ. ಎ ಗುಂಪಿನಲ್ಲಿ ಜರ್ಮನಿ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಹಾಗೂ ಗ್ರೇಟ್ ಬ್ರಿಟನ್ ತಂಡಗಳಿವೆ.
ಕಳೆದ ಬಾರಿಯ ಜೊಹೊರ್ ಕಪ್ ಹಾಲಿ ಚಾಂಪಿಯನ್ ಭಾರತವು ಜೂನ್ನಲ್ಲಿ ನಡೆದಿದ್ದ ಜೂನಿಯರ್ ಏಶ್ಯನ್ ಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು 2-1 ಅಂತರದಿಂದ ಮಣಿಸಿತ್ತು. ನಾಲ್ಕನೇ ಬಾರಿ ಪ್ರಶಸ್ತಿ ಜಯಿಸಿ ದಾಖಲೆ ಬರೆದಿತ್ತು.
ಭಾರತವು ಗ್ರೂಪ್ ಹಂತದಲ್ಲಿ ಮಲೇಶ್ಯ ಹಾಗೂ ನ್ಯೂಝಿಲ್ಯಾಂಡ್ ತಂಡಗಳನ್ನು ಕ್ರಮವಾಗಿ ಅಕ್ಟೋಬರ್ 28 ಹಾಗೂ 30ರಂದು ನಡೆಯಲಿದೆ.
ಸೆಮಿ ಫೈನಲ್ನಲ್ಲಿ ಅರ್ಹತೆ ಗಿಟ್ಟಿಸಲು ತಂಡವು ಗ್ರೂಪ್ ಹಂತದಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಬೇಕು.
ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ ನಮ್ಮ ಅಭಿಯಾನವನ್ನು ಶುಭಾರಂಭ ಮಾಡುವ ಹಾಗೂ ಫೈನಲ್ ತಲುಪಲು ನಮ್ಮ ಪ್ರದರ್ಶನದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ನಾಯಕ ಉತ್ತಮ್ ಸಿಂಗ್ ಹೇಳಿದ್ದಾರೆ.
ಈ ಟೂರ್ನಮೆಂಟ್ನಲ್ಲಿ ಭಾಗವಹಿಸುವ ತಂಡಗಳು 2023ರ ಎಫ್ಐಎಚ್ ಹಾಕಿ ಜೂನಿಯರ್ ವಿಶ್ವಕಪ್ನಲ್ಲೂ ಪಾಲ್ಗೊಳ್ಳಲಿದ್ದು, ತಮ್ಮ ತಂಡದ ಸಂಯೋಜನೆ ಹಾಗೂ ಎದುರಾಳಿ ತಂಡಗಳನ್ನು ಅವಲೋಕಿಸಲು ಇದೊಂದು ಅವಕಾಶವಾಗಿದೆ.