18, 17, 12 ಕೋಟಿ ರೂ. ಗಳಿಸುತ್ತಿರುವವರು ಏನು ಮಾಡುತ್ತಿದ್ದಾರೆ?: ಸಿಎಸ್ಕೆ ಮಾಜಿ ಆಟಗಾರ ಸುರೇಶ್ ರೈನಾ ಪ್ರಶ್ನೆ

ಸುರೇಶ್ ರೈನಾ | PC : X
ಚೆನ್ನೈ: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ ತಂಡವು ತಪ್ಪುಗಳನ್ನು ಮಾಡಿದೆ ಎಂಬುದಾಗಿ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಹೇಳಿದ್ದಾರೆ.
‘‘ತಂಡದ ಆಡಳಿತವನ್ನು ಸುದೀರ್ಘ ಕಾಲದಿಂದ ಕಾಶಿ ವಿಶ್ವನಾಥನ್ ನಿಭಾಯಿಸುತ್ತಿದ್ದಾರೆ. ಆಟಗಾರರ ಖರೀದಿ ಮತ್ತು ಆಡಳಿತವನ್ನು ರೂಪಾ ಮಾ ನೋಡಿಕೊಳ್ಳುತ್ತಿದ್ದಾರೆ. ಯಾರೇ ಉಸ್ತುವಾರಿ ಹೊತ್ತಿರಲಿ, ಈ ಬಾರಿ ಆಟಗಾರರನ್ನು ಸರಿಯಾಗಿ ಖರೀದಿಸಲಾಗಿಲ್ಲ ಎನ್ನುವ ಅನಿಸಿಕೆ ಮಹೇಂದ್ರೆ ಸಿಂಗ್ ಧೋನಿಯದ್ದು’’ ಎಂದು ರೈನಾ ‘ಸ್ಟಾರ್ ಸ್ಪೋರ್ಟ್ಸ್’ನಲ್ಲಿ ಹೇಳಿದ್ದಾರೆ.
‘‘ಒಳಗಿನ ಗುಂಪು ಹರಾಜನ್ನು ನಿಭಾಯಿಸುತ್ತಿದೆ. ಈ ಮಾದರಿಯ ಆಯ್ಕೆಯನ್ನು ಧೋನಿ ಮಾಡಲು ಸಾಧ್ಯವಿಲ್ಲ. ಅವರು ತನಗೆ ಬೇಕಾದ 4-5 ಆಟಗಾರರನ್ನು ಹೆಸರಿಸಬಹುದು. ಅವರ ಪೈಕಿ ಕೆಲವರನ್ನು ಉಳಿಸಿಕೊಳ್ಳಲಾಗುತ್ತದೆ. ಧೋನಿ 43ರ ಹರೆಯದಲ್ಲೂ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಇತರ 10 ಆಟಗಾರರು ಏನು ಮಾಡುತ್ತಿದ್ದಾರೆ? 18 ಕೋಟಿ ರೂ., 17 ಕೋಟಿ ರೂ., 12 ಕೋಟಿ ರೂ. ಗಳಿಸುತ್ತಿರುವ ಆಟಗಾರರು ಏನು ಮಾಡುತ್ತಿದ್ದಾರೆ? ಅವರು ನಾಯಕನಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ’’ ಎಂದು ಸುರೇಶ್ ರೈನಾ ಹೇಳಿದರು.