ಟಿ20 ಕ್ರಿಕೆಟ್: 13,000 ರನ್ ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ | PC : PTI
ಮುಂಬೈ: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ 13,000 ರನ್ ಪೂರೈಸಿದ ಭಾರತದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸೋಮವಾರ ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ ಕೊಹ್ಲಿ ಈ ಮೈಲಿಗಲ್ಲು ತಲುಪಿದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕೊಹ್ಲಿ ಅವರು ಕ್ರಿಸ್ ಗೇಲ್, ಅಲೆಕ್ಸ್ ಹೇಲ್ಸ್, ಶುಐಬ್ ಮಲಿಕ್ ಹಾಗೂ ಕಿರೊನ್ ಪೊಲಾರ್ಡ್ ನಂತರ ಈ ಸಾಧನೆ ಮಾಡಿದ ವಿಶ್ವದ 5ನೇ ಆಟಗಾರನಾಗಿದ್ದಾರೆ.
36ರ ಹರೆಯದ ಕೊಹ್ಲಿ ಟಿ-20 ಕ್ರಿಕೆಟ್ನಲಿ ಸುಮಾರು 42 ಸರಾಸರಿ ಹೊಂದಿದ್ದು, 134 ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. 9 ಟಿ-20 ಶತಕ ಹಾಗೂ 98 ಅರ್ಧಶತಕಗಳನ್ನು ಗಳಿಸಿದ್ದಾರೆ.
ಮುಂಬೈ ತಂಡದ ವಿರುದ್ಧದ ಪಂದ್ಯಕ್ಕಿಂತ ಮೊದಲು ಕೊಹ್ಲಿ ಅವರು ಐಪಿಎಲ್ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದರು. ಕೊಹ್ಲಿ ಟಿ-20 ಸ್ಪರ್ಧಾವಳಿಯಲ್ಲಿ 256 ಪಂದ್ಯಗಳಲ್ಲಿ 38.81ರ ಸರಾಸರಿಯಲ್ಲಿ 8,111 ರನ್ ಗಳಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸ್ಕೋರ್ ಗಳಿಸಿದ ಆಟಗಾರರು:
*ಕ್ರಿಸ್ ಗೇಲ್(ವೆಸ್ಟ್ಇಂಡೀಸ್)-14,562 ರನ್
*ಅಲೆಕ್ಸ್ ಹೇಲ್ಸ್(ಇಂಗ್ಲೆಂಡ್)-13,610 ರನ್
*ಶುಐಬ್ ಮಲಿಕ್(ಪಾಕಿಸ್ತಾನ)-13,557 ರನ್
*ಕಿರೋನ್ ಪೊಲಾರ್ಡ್(ವೆಸ್ಟ್ಇಂಡೀಸ್)-13,537 ರನ್
*ವಿರಾಟ್ ಕೊಹ್ಲಿ(ಭಾರತ)-13,000 ರನ್