17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ
ರೋಚಕ ಪಂದ್ಯದಲ್ಲಿ ಹೋರಾಡಿ ಸೋತ ದಕ್ಷಿಣ ಆಫ್ರಿಕಾ | ಮತ್ತೆ ಚೋಕರ್ಸ್ ಪಟ್ಟ
Photo : x.com/T20WorldCup
ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಗೆ ಮತ್ತೆ ಚೋಕರ್ಸ್ ಪಟ್ಟ ಖಾಯಂ ಆಗಿದೆ.
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದ ರೋಹಿತ್ ಶರ್ಮಾ, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಮತ್ತೆ ವಿಶ್ವಕಪ್ ತಂದರು.
20ನೇ ಓವರ್ ಆರಂಭದಲ್ಲಿ ಸೂರ್ಯ ಕುಮಾರ್ ಯಾದವ್ ಪಡೆದ ಡೇವಿಡ್ ಮಿಲ್ಲರ್ ಅವರ ಬೌಂಡರಿ ಲೈನ್ ಕ್ಯಾಚ್, 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಕ್ಯಾಚ್ ಪಡೆದ ಶ್ರೀಶಾಂತ್ ಅವರನ್ನು ನೆನಪಿಸಿತು.
Live Updates
- 29 Jun 2024 4:42 PM GMT
ಬೌಲಿಂಗ್ ನಲ್ಲಿ ಬದಲಾವಣೆ. ಐದನೇ ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್
- 29 Jun 2024 4:41 PM GMT
ಕ್ವಿಂಟನ್ ಡಿ ಕಾಕ್ 10 ಎಸೆತದಲ್ಲಿ 10 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್ 6 ಎಸೆತದಲ್ಲಿ 6 ರನ್ ಗಳಿಸಿದ್ದಾರೆ.
- 29 Jun 2024 4:37 PM GMT
ಮೂರನೇ ಓವರ್ ಮುಕ್ತಾಯ