17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟ ಭಾರತ
ರೋಚಕ ಪಂದ್ಯದಲ್ಲಿ ಹೋರಾಡಿ ಸೋತ ದಕ್ಷಿಣ ಆಫ್ರಿಕಾ | ಮತ್ತೆ ಚೋಕರ್ಸ್ ಪಟ್ಟ
Photo : x.com/T20WorldCup
ಬ್ರಿಡ್ಜ್ ಟೌನ್ : ಇಲ್ಲಿನ ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಸೋಲಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿದೆ. ಆ ಮೂಲಕ ದಕ್ಷಿಣ ಆಫ್ರಿಕಾ ಗೆ ಮತ್ತೆ ಚೋಕರ್ಸ್ ಪಟ್ಟ ಖಾಯಂ ಆಗಿದೆ.
2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ, ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಚಾಂಪಿಯನ್ ಪಟ್ಟ ಪಡೆಯಿತು. 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ್ದ ರೋಹಿತ್ ಶರ್ಮಾ, ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಮತ್ತೆ ವಿಶ್ವಕಪ್ ತಂದರು.
20ನೇ ಓವರ್ ಆರಂಭದಲ್ಲಿ ಸೂರ್ಯ ಕುಮಾರ್ ಯಾದವ್ ಪಡೆದ ಡೇವಿಡ್ ಮಿಲ್ಲರ್ ಅವರ ಬೌಂಡರಿ ಲೈನ್ ಕ್ಯಾಚ್, 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ಕ್ಯಾಚ್ ಪಡೆದ ಶ್ರೀಶಾಂತ್ ಅವರನ್ನು ನೆನಪಿಸಿತು.
Live Updates
- 29 Jun 2024 4:20 PM GMT
ದಕ್ಷಿಣ ಆಫ್ರಿಕಾ ಪರ ಇನ್ನಿಂಗ್ಸ್ ಆರಂಭಿಸಿದ ರೀಝಾ ಹೆಂಡ್ರಿಕ್ಸ್ ಮತ್ತು ಕ್ವಿಂಟನ್ ಡಿ ಕಾಕ್
- 29 Jun 2024 4:19 PM GMT
ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ
- 29 Jun 2024 4:08 PM GMT
ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದ ಭಾರತ
- 29 Jun 2024 4:06 PM GMT
ವಿಕೆಟ್ ಒಪ್ಪಿಸಿದ ಶಿವಂ ದುಬೆ. 15 ಬಾಲ್ ಗಳಲ್ಲಿ 1 ಸಿಕ್ಸ್ 3 ಬೌಂಡರಿಗಳೊಂದಿಗೆ 27 ರನ್ ಗಳಿಸಿದ್ದ ದುಬೆ. ಮೊದಲ ಇನ್ನಿಂಗ್ಸ್ ಮುಕ್ತಾಯಕ್ಕೆ ಕೇವಲ ಎರಡು ಎಸೆತ ಬಾಕಿ
- 29 Jun 2024 4:05 PM GMT
ಶಿವಂ ದುಬೆ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್ ನಲ್ಲಿ ಕೊನೆಯ ಓವರ್ ಎದುರಿಸುತ್ತಿದ್ದಾರೆ. ಕೊನೆಯ ಓವರ್ ಎಸೆಯುತ್ತಿರುವ ಆಂಡ್ರಿಜ್ ನೋಕಿಯ
- 29 Jun 2024 4:04 PM GMT
ಹಾರ್ದಿಕ್ ಪಾಂಡ್ಯ ಕ್ರೀಸ್ ಗೆ ಆಗಮನ
- 29 Jun 2024 4:02 PM GMT
18.5 ಓವರ್ ನಲ್ಲಿ 76 ರನ್ ಗಳಿಸಿ ಔಟ್ ಆದ ವಿರಾಟ್ ಕೊಹ್ಲಿ. ವಿಕೆಟ್ ಪಡೆದ ಮಾರ್ಕೋ ಜಾನ್ಸನ್