ಭಾರತದ ಡಿ ಗುಕೇಶ್ ನೂತನ ಚೆಸ್ ವಿಶ್ವ ಚಾಂಪಿಯನ್
ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ
ಡಿ ಗುಕೇಶ್ | PC : PTI
ಸಿಂಗಪುರ : ಡಿ ಗುಕೇಶ್ ಅವರು ಗುರುವಾರ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ FIDE ವಿಶ್ವ ಚಾಂಪಿಯನ್ಶಿಪ್ 2024 ಅನ್ನು ಗೆದ್ದಿದ್ದಾರೆ.
ಭಾರತೀಯ ಗ್ರ್ಯಾಂಡ್ಮಾಸ್ಟರ್ ಡಿ ಗುಕೇಶ್ 18 ನೇ ಮತ್ತು ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಆದರು. 14ನೇ ಗೇಮ್ ಗೆದ್ದ ನಂತರ ಗುಕೇಶ್ ತಮ್ಮ ಸಾಧನೆಗೆ ಆನಂದ ಭಾಷ್ಪ ಸುರಿಸಿದರು.
14-ಗೇಮ್ನ ಕೊನೆಯ ಕ್ಲಾಸಿಕಲ್ ಟೈಮ್ ಕಂಟ್ರೋಲ್ ಗೇಮ್ ಅನ್ನು ಗೆದ್ದ ನಂತರ ಲಿರೆನ್ನ 6.5 ಕ್ಕೆ ವಿರುದ್ಧವಾಗಿ ಅಗತ್ಯವಿರುವ 7.5 ಪಾಯಿಂಟ್ಗಳನ್ನು ಗುಕೇಶ್ ಗಳಿಸಿದರು.
ಗುರುವಾರ ಗುಕೇಶ್ ಅವರ ಸಾಧನೆಯ ಮೊದಲು, ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಪದಚ್ಯುತಗೊಳಿಸಿ 22 ನೇ ವಯಸ್ಸಿನಲ್ಲಿ ಪ್ರಶಸ್ತಿಯನ್ನು ಗೆದ್ದಾಗ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದರು.
ಈ ವರ್ಷದ ಆರಂಭದಲ್ಲಿ ಕ್ಯಾಂಡಿಡೇಟ್ಸ್ ಪಂದ್ಯಾವಳಿಯನ್ನು ಗೆದ್ದ ನಂತರ ಗುಕೇಶ್ ಅವರು ಅತ್ಯಂತ ಕಿರಿಯ ಆಟಗಾರನಾಗಿ ಕೂಟ ಪ್ರವೇಶಿಸಿದ್ದರು.
ವಿಶ್ವನಾಥನ್ ಆನಂದ್ ನಂತರ ಡಿ ಗುಕೇಶ್ ಅವರು ಜಾಗತಿಕ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರಾಗಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆನಂದ್ ಕೊನೆಯ ಬಾರಿಗೆ 2013 ರಲ್ಲಿ ಪ್ರಶಸ್ತಿ ಗೆದ್ದಿದ್ದರು.