ನಾಳೆ ಮೂರನೇ ಟ್ವೆಂಟಿ-20: ಭಾರತ-ದಕ್ಷಿಣ ಆಫ್ರಿಕಾ ಮುಖಾಮುಖಿ
Photo: PTI
ಜೋಹಾನ್ಸ್ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಗುರುವಾರ ವಾಂಡರರ್ಸ್ ಸ್ಟೇಡಿಯಮ್ನಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಮಳೆ ಬಾಧಿತ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಹರಿಣ ಪಡೆ ಟೀಮ್ ಇಂಡಿಯಾವನ್ನು ಡಿಎಲ್ಎಸ್ ನಿಯಮದ ಪ್ರಕಾರ ಐದು ವಿಕೆಟ್ಗಳ ಅಂತರದಿಂದ ಮಣಿಸಿತ್ತು.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಮ್ ಪಿಚ್ ಸಮತೋಲಿತವಾಗಿದೆ. ಹಿಂದಿನ 20 ಪಂದ್ಯಗಳಲ್ಲಿ ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ತಂಡ ಗಳಿಸಿರುವ ಸರಾಸರಿ ಸ್ಕೋರ್ 163 ರನ್.
ಈ ಮೈದಾನದಲ್ಲಿ ವೇಗದ ಬೌಲರ್ಗಳು ಹೆಚ್ಚು ಯಶಸ್ಸು ಕಂಡಿದ್ದಾರೆ. ಒಟ್ಟು ವಿಕೆಟ್ಗಳಲ್ಲಿ ಶೇ.67ರಷ್ಟು ವಿಕೆಟ್ ವೇಗಿಗಳು ಪಡೆದಿದ್ದಾರೆ. ತಾಪಮಾನವು 28 ಡಿಗ್ರಿ ಸೆಲ್ಸಿಯಸ್ನಲ್ಲಿ 27 ಶೇ. ಆರ್ದ್ರತೆಯೊಂದಿಗೆ ಇರುತ್ತದೆ.
*ಟಿ-20 ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ-ಭಾರತ ಹೆಡ್-ಟು-ಹೆಡ್
ದಕ್ಷಿಣ ಆಫ್ರಿಕಾ ಹಾಗೂ ಭಾರತ 25 ಬಾರಿ ಮುಖಾಮುಖಿಯಾಗಿವೆ. ಭಾರತವು 13 ಬಾರಿ ಜಯಶಾಲಿಯಾಗಿದೆ. ದಕ್ಷಿಣ ಆಫ್ರಿಕಾವು ಭಾರತ ವಿರುದ್ಧ ಹಿಂದಿನ 5 ಪಂದ್ಯಗಳಲ್ಲಿ ಮೂರರಲ್ಲಿ ಜಯ ಸಾಧಿಸಿದೆ.
ಗುರುವಾರದ ಪಂದ್ಯದಲ್ಲಿ ಯಾರು ಫೇವರಿಟ್ ಎಂದು ಅಂದಾಜಿಸುವುದುು ಕಷ್ಟಕರ. ಭಾರತವು ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಮರುಹೋರಾಟ ನೀಡಿ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದೆ.
ಪಂದ್ಯ ಆರಂಭದ ಸಮಯ: ರಾತ್ರಿ 8:30