ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್: ಮತ್ತೊಮ್ಮೆ ಅವಕಾಶ ವಂಚಿತರಾದ ಯುವ ಬ್ಯಾಟರ್ ಸರ್ಫರಾಝ್ ಖಾನ್
ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅಭಿಮಾನಿಗಳು
ಸರ್ಫರಾಜ್ ಖಾನ್ (PTI)
ಹೊಸದಿಲ್ಲಿ: ರವೀಂದ್ರ ಜಡೇಜಾ ಮತ್ತು ಕೆ.ಎಲ್. ರಾಹುಲ್ ಗಾಯದ ಕಾರಣದಿಂದ ಹೊರಗುಳಿದ ಪರಿಣಾಮ ಸುದೀರ್ಘ ಕಾಯುವಿಕೆಯ ನಂತರ ರಣಜಿ ಬ್ಯಾಟರ್ ಸರ್ಫರಾಜ್ ಖಾನ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ದೇಶಿ ಕ್ರಿಕೆಟ್ ನಲ್ಲಿ ಅಬ್ಬರಿಸಿದ್ದ ಬ್ಯಾಟರ್ ಸರ್ಫರಾಝ್ ಖಾನ್ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ತಂಡಕ್ಕೆ ಸೇರಿಸಿದಾಗಿನಿಂದ ಅಭಿಮಾನಿಗಳು ಅವರ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾಯುತ್ತಿದ್ದರು. ಅವರು ವಿಶಾಖಪಟ್ಟಣಂ ನಲ್ಲಿ ತಮ್ಮ ಟೆಸ್ಟ್ ಕ್ಯಾಪ್ ಪಡೆಯುತ್ತಾರೆ ಎಂದು ಕಾಯುತ್ತಿದ್ದರು. ಆದರೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡುವ ಬಳಗವನ್ನು ಘೋಷಿಸಿದ್ದು, ಸರ್ಫರಾಝ್ ಖಾನ್ ಹೆಸರು ಕಾಣೆಯಾಗಿದೆ. ರಜತ್ ಪಾಟಿದಾರ್ ಗೆ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವ ಅವಕಾಶ ದೊರೆತಿದೆ.
ಇಂಗ್ಲೆಂಡ್ ವಿರುದ್ಧ ಸರ್ಫರಾಝ್ ಖಾನ್ ಅವರನ್ನು ಆಯ್ಕೆ ಮಾಡದಿದ್ದಕ್ಕಾಗಿ ಅಭಿಮಾನಿಗಳು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶಾಖಪಟ್ಟಣಂನ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿಕೆಯ ಪ್ರಕಾರ, ವೈಜಾಗ್ನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಮುಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
“ಸರಣಿಯ ಅವಧಿ ಮತ್ತು ಇತ್ತೀಚಿನ ದಿನಗಳಲ್ಲಿ ಅವರು ಆಡಿದ ಕ್ರಿಕೆಟ್ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಕೋಟ್ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ಗೆ ಅವರು ಆಯ್ಕೆಗೆ ಲಭ್ಯವಾಗಲಿದ್ದಾರೆ. ಅವೇಶ್ ಖಾನ್ 2ನೇ ಟೆಸ್ಟ್ಗೆ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ" ಎಂದು ಬಿಸಿಸಿಐ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಪಂದ್ಯದಿಂದ ಹೊರಗುಳಿದಿದ್ದು, ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜಾ ಗಾಯದ ಕಾರಣ ಎರಡನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ.
2 mins silence for those who thought sarfaraz would make in the 11
— B I L L Y (@ogsigma007) February 2, 2024
How is patidar playing ahead of sarfaraz???
— Sarthak (@Sarthakbot) February 2, 2024
There will soon be a film called ‘Kaun Sarfaraz Khan?’ pic.twitter.com/t5pc5CRpzX
— Rushik Rawal (@RushikRawal) February 2, 2024
#SarfarazKhan
— Shivaay (@PramodPate25580) February 2, 2024
It's really a heartbreak.. shreyas Iyer and gill getting more chance but not sarfaraz khan ...can you explain @BCCI
#SarfarazKhan
— Shivaay (@PramodPate25580) February 2, 2024
It's really a heartbreak.. shreyas Iyer and gill getting more chance but not sarfaraz khan ...can you explain @BCCI
ಭಾರತ (ಆಡುವ XI): ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮುಖೇಶ್ ಕುಮಾರ್ ಮತ್ತು ಕುಲದೀಪ್ ಯಾದವ್.
ಇಂಗ್ಲೆಂಡ್ (ಆಡುವ XI): ಝಾಕ್ ಕ್ರಾಲಿ, ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ , ರೆಹಾನ್ ಅಹ್ಮದ್, ಟಾಮ್ ಹಾರ್ಟ್ಲಿ, ಶೋಯೆಬ್ ಬಶೀರ್ ಮತ್ತು ಜೇಮ್ಸ್ ಆಂಡರ್ಸನ್.
ಜೈಸ್ವಾಲ್ ಶತಕ; ಭಾರತ 240/3
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸುತ್ತಿರುವ ಭಾರತ, ಜೈಸ್ವಾಲ್ ಅವರ ಶತಕದ ನೆರವಿನಿಂದ 240 ರನ್ ಗಳಿಸಿದೆ. ಜೈಸ್ವಾಲ್ 139 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಅವರಿಗೆ ರಜತ್ ಪಾಟೀದಾರ್ (30*) ಸಾಥ್ ನೀಡುತ್ತಿದ್ದಾರೆ.