ಐಪಿಎಲ್ ನಲ್ಲಿ ಹದ್ದಿನ ಕಣ್ಣಿಡುವ ಅಂಪಯರ್ ಗೆ ವೇತನವೆಷ್ಟು ಗೊತ್ತೇ?

PC : X \ IPL
ಮುಂಬೈ: ಕ್ರಿಕೆಟ್ ನಲ್ಲಿ ಅಂಪಯರ್ ಗಳದ್ದು ಕಠಿಣ ಕೆಲಸ. ಆದರೆ, ಅವರ ಕೆಲಸಕ್ಕಾಗಿ ಯಾರೂ ಅವರನ್ನು ಶ್ಲಾಘಿಸುವುದಿಲ್ಲ ಅಥವಾ ಗುರುತಿಸುವುದಿಲ್ಲ. ಅಂಪಯರ್ ಒಬ್ಬರು ಒತ್ತಡದಲ್ಲಿ ನೀಡುವ ತಪ್ಪು ತೀರ್ಪನ್ನು ಎಲ್ಲರೂ ಟೀಕಿಸುತ್ತಾರೆ. ಆದರೆ, ಉತ್ತಮ ಅಥವಾ ಪರಿಪೂರ್ಣ ತೀರ್ಪು ನೀಡಿರುವುದಕ್ಕಾಗಿ ಅವರನ್ನು ಯಾರೂ ಶ್ಲಾಘಿಸುವುದಿಲ್ಲ. ಇದಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಡ ಹೊರತಲ್ಲ.
ಅಂಪಯರ್ ಆಗಲು ಬಯಸುವವರು ತೀರಾ ಕಡಿಮೆ. ಹಾಗಾದರೆ, ಐಪಿಎಲ್ ನಲ್ಲಿ ಅಂಪಯರ್ ಗಳಿಗೆ ಎಷ್ಟು ವೇತನ ನೀಡಲಾಗುತ್ತಿದೆ?
ಐಪಿಎಲ್ 2025ರಲ್ಲಿ ಮೈದಾನದ ಅಂಪಯರ್ ಗಳು ಪಂದ್ಯವೊಂದಕ್ಕೆ 3 ಲಕ್ಷ ರೂ. ಪಡೆಯುತ್ತಾರೆ. ಅದೇ ವೇಳೆ, ಫೋರ್ತ್ ಅಂಪಯರ್ ಪಂದ್ಯವೊಂದಕ್ಕೆ 2 ಲಕ್ಷ ರೂ. ಗಳಿಸುತ್ತಾರೆ.
ಐಪಿಎಲ್ 2025ರಲ್ಲಿ, ಇಂಪ್ಯಾಕ್ಟ್ ಪ್ಲೇಯರ್ ಸೇರಿದಂತೆ ತಂಡವೊಂದರ ಎಲ್ಲಾ ಆಡುವ ಆಟಗಾರರು ಪಂದ್ಯವೊಂದಕ್ಕೆ 7.5 ಲಕ್ಷ ರೂ. ಪಂದ್ಯಶುಲ್ಕ ಪಡೆಯುತ್ತಾರೆ. ಈ ವೇತನವು ಆಟಗಾರರಿಗೆ ಅವರ ತಂಡಗಳು ನೀಡುವ ಖರೀದಿ ಮೊತ್ತಕ್ಕೆ ಹೆಚ್ಚುವರಿಯಾಗಿದೆ.