ಅಂಡರ್-19 ಏಕದಿನ ಏಶ್ಯಾ ಕಪ್: ಭಾರತ ಫೈನಲ್‌ಗೆ
ಸೆಮಿಫೈನಲ್‌ನಲ್ಲಿ ಶ್ರೀಲಂಕಾಗೆ 7 ವಿಕೆಟ್‌ಗಳ ಸೋಲು
ಶಾರ್ಜಾ, ಡಿ. 6: ಅಂಡರ್-19 ಏಕದಿನ ಏಶ್ಯಾ ಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ, 13 ವರ್ಷದ ಬಾಲಪ್ರತಿಭೆ ವೈಭವ್ ಸೂರ್ಯವಂಶಿಯ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತವು ಶುಕ್ರವಾರ ಶ್ರೀಲಂಕಾ ತಂಡವನ್ನು ಏಳು ವಿಕೆಟ್‌ಗಳಿಂದ ಸಮಗ್ರವಾಗಿ ಸೋಲಿಸಿದೆ.
ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ 67 ರನ್‌ಗಳನ್ನು ಸಿಡಿಸಿದರು. ಅದರಲ್ಲಿ ಐದು ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳಿದ್ದವು. ಭಾರತವು 170 ಎಸೆತಗಳು ಬಾಕಿಯಿರುವಂತೆಯೇ, ಗೆಲ್ಲಲು ಬೇಕಾದ 170 ರನ್‌ಗಳನ್ನು ಮಾಡಿತು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಆರಿಸಿತು. ಅದು 46.2 ಓವರ್‌ಗಳಲ್ಲಿ ಕೇವಲ 173 ರನ್‌ಗಳಿಗೆ ತನ್ನ ಇನಿಂಗ್ಸ್ ಮುಗಿಸಿತು.
ಭಾರತದ ಪರವಾಗಿ ಚೇತನ್ ಶರ್ಮಾ (3-34), ಕಿರಣ್ ಚೋರ್ಮಳೆ (2-32) ಮತ್ತು ಆಯುಶ್ ಮಾತ್ರೆ (2-73) ಎದುರಾಳಿ ಬ್ಯಾಟರ್‌ಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದರು.
ಲಕ್ವಿನ್ ಅಬಯಸಿಂಘೆ (110 ಎಸೆತಗಳಲ್ಲಿ 69) ಮತ್ತು ಶರುಜನ್ ಶಣ್ಮುಗನಾಥನ್ (78 ಎಸೆತಗಳಲ್ಲಿ 42) ದಿಟ್ಟ ಪ್ರತಿಹೋರಾಟ ನೀಡಿದ ಹೊರತಾಗಿಯೂ, ಶಿಸ್ತುಬದ್ಧ ಭಾರತೀಯ ಬೌಲಿಂಗ್‌ನ ಎದುರು ಶ್ರೀಲಂಕಾ ತಂಡಕ್ಕೆ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.
ಆರಂಭಿಕರಾದ ಆಯುಶ್ ಮಾತ್ರೆ (28 ಎಸೆತಗಳಲ್ಲಿ 34 ರನ್) ಮತ್ತು ವೈಭವ್ ಸೂರ್ಯವಂಶಿ ಭಾರತೀಯ ಇನಿಂಗ್ಸ್‌ಗೆ ಭದ್ರ ಅಡಿಪಾಯವನ್ನು ಹಾಕಿದರು. ಅವರು ಮೊದಲ ವಿಕೆಟ್‌ಗೆ 91 ರನ್‌ಗಳನ್ನು ಸೇರಿಸಿದರು.
ಸೂರ್ಯವಂಶಿ ಇನಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆಹೋದರು. ಅವರು ಡುಲ್ನಿತ್ ಸಿಗೆರ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನಲ್ಲಿ ಬೆನ್ನು ಬೆನ್ನಿಗೆ ಸಿಕ್ಸರ್‌ಗಳು ಮತ್ತು ಒಂದು ಬೌಂಡರಿ ಬಾರಿಸಿದರು. ಅವರು ಆ ಓವರ್‌ನಲ್ಲಿ 27 ರನ್‌ಗಳನ್ನು ನೀಡಿದರು.
ಮಾತ್ರೆಯ ಪತನದ ಬಳಿಕ, ಸಿ. ಆ್ಯಂಡ್ರಿ ಸಿದ್ಧಾರ್ಥ (27 ಎಸೆತಗಳಲ್ಲಿ 22 ರನ್) ಜೊತೆಗೆ ಸೂರ್ಯವಂಶಿ ಇನ್ನೊಂದು ಮಹತ್ವದ ಭಾಗೀದಾರಿಕೆ ನಿಭಾಯಿಸಿದಿರು.
ನಾಯಕ ಮುಹಮ್ಮದ್ ಅಮಾನ್ (25 ಅಜೇಯ) ಮತ್ತು ಕೆ.ಪಿ. ಕಾರ್ತಿಕೇಯ (11 ಅಜೇಯ) ಭಾರತದ ವಿಜಯವನ್ನು ಪೂರ್ಣಗೊಳಿಸಿದರು.
ಭಾರತವು 21.4 ಓವರ್‌ಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು 175 ರನ್‌ಗಳನ್ನು ಗಳಿಸಿತು.
ವೈಭವ್ ಸೂರ್ಯವಂಶಿಯನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ರವಿವಾರ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಭಾರತವು ಬಾಂಗ್ಲಾದೇಶವನ್ನು ಎದುರಿಸಲಿದೆ.
ಇನ್ನೊಂದು ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವು ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿದೆ. ಬಾಂಗ್ಲಾದೇಶವು ಗೆಲ್ಲಲು ಬೇಕಾದ 117 ರನ್‌ಗಳನ್ನು ಕೇವಲ 22.1 ಓವರ್‌ಗಳಲ್ಲಿ ಗಳಿಸಿತು.