ಯುಎಸ್ ಓಪನ್ | ಸಾರಾ ಇರಾನಿ, ಆಂಡ್ರಿಯಾ ವವಸೋರಿಗೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ
Photo Credit: REUTERS
ನ್ಯೂಯಾರ್ಕ್ : ಇಟಲಿಯ ಸಾರಾ ಇರಾನಿ ಹಾಗೂ ಆಂಡ್ರಿಯಾ ವವಸೋರಿ ಗುರುವಾರ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಇರಾನಿ ಹಾಗೂ ವವಸೋರಿ ಶ್ರೇಯಾಂಕರಹಿತ ಅಮೆರಿಕದ ಜೋಡಿ ಟೇಲರ್ ಟೌನ್ಸೆಂಡ್ ಹಾಗೂ ಡೊನಾಲ್ಡ್ ಯಂಗ್ ಅವರನ್ನು 7-6(0), 7-5 ಸೆಟ್ ಗಳ ಅಂತರದಿಂದ ಮಣಿಸಿದರು.
ಐದು ಬಾರಿ ಮಹಿಳೆಯರ ಡಬಲ್ಸ್ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿರುವ ಇರಾನಿ ಹಾಗೂ ವವಸೋರಿಗೆ ಇದು ಮಿಕ್ಸೆಡ್ ಡಬಲ್ಸ್ ನಲ್ಲಿ ಚೊಚ್ಚಲ ಪ್ರಶಸ್ತಿಯಾಗಿದೆ. ವಿಂಬಲ್ಡನ್ ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೂರನೇ ಪ್ರಮುಖ ಪಂದ್ಯಾವಳಿಯಲ್ಲಿ ಒಟ್ಟಿಗೆ ಆಡಿದ್ದಾರೆ.
ಇದು ತುಂಬಾ ವಿಶೇಷವಾಗಿದೆ. ಸಾರಾ ಅವರೊಂದಿಗೆ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ನನ್ನ ಕನಸು ನನಸಾಗಿದೆ ಎಂದು ವವಸೋರಿ ಹೇಳಿದ್ದಾರೆ.
ಯುಎಸ್ ಓಪನ್ ನಲ್ಲಿ ಟೌನ್ಸೆಂಡ್ಗೆ ಭಾರೀ ನಿರಾಸೆಯಾಗಿದೆ. ಮಹಿಳೆಯರ ಡಬಲ್ಸ್ ನಲ್ಲಿ ಕಟೆರಿನ ಸಿನಿಯಾಕೋವಾರೊಂದಿಗೆ ಸೆಮಿ ಫೈನಲ್ ಗೆ ತಲುಪಿದ್ದ ಟೌನ್ಸೆಂಡ್ ಅವರು ಝಾಂಗ್ ಹಾಗೂ ಕ್ರಿಸ್ಟಿನಾ ಮ್ಲಾಡೆನೋವಿಕ್ ವಿರುದ್ಧ ಸೋತಿದ್ದರು.