ಯು.ಎಸ್. ಓಪನ್: ಹಾಲಿ ಚಾಂಪಿಯನ್ ಅಲ್ಕರಾಝ್ 2ನೇ ಸುತ್ತಿಗೆ ಲಗ್ಗೆ
Photo : instagram/carlitosalcarazz/
ನ್ಯೂಯಾರ್ಕ್, ಆ.30: ಜರ್ಮನಿಯ ಎದುರಾಳಿ ಡೊಮಿನಿಕ್ ಕೋಪ್ಫೆರ್ ಗಾಯಗೊಂಡು ನಿವೃತ್ತಿಯಾದ ಕಾರಣ ಹಾಲಿ ಚಾಂಪಿಯನ್ ಕಾರ್ಲೊಸ್ ಅಲ್ಕರಾಝ್ ಅವರು ಯು.ಎಸ್. ಓಪನ್ನಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಡೊಮಿನಿಕ್ ದುರದೃಷ್ಟವಶಾತ್ ಗಾಯದಿಂದ ನಿವೃತ್ತಿಯಾದಾಗ 20ರ ಹರೆಯದ ಸ್ಪೇನ್ ಆಟಗಾರ ಅಲ್ಕರಾಝ್ 6-2, 3-2 ಅಂತರದಿಂದ ಮುನ್ನಡೆಯಲ್ಲಿದ್ದರು.
ಅಗ್ರ ಶ್ರೇಯಾಂಕದ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಲಾಯ್ಡ್ ಹ್ಯಾರಿಸ್ರನ್ನು ಎದುರಿಸಲಿದ್ದಾರೆ.
ಟೂರ್ನಮೆಂಟ್ ಮುಕ್ತಾಯದ ನಂತರ ಅಲ್ಕರಾಝ್ ಅವರ ವಿಶ್ವದ ನಂ.1 ಸ್ಥಾನ ಕೈತಪ್ಪಲಿದೆ. ಮೊದಲ ಸುತ್ತಿನಲ್ಲಿ ಪ್ರಾಬಲ್ಯ ಸಾಧಿಸಿರುವ ಹಿನ್ನೆಲೆಯಲ್ಲಿ ನೊವಾಕ್ ಜೊಕೊವಿಕ್ ಮತ್ತೊಮ್ಮೆ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಪಡೆಯಲಿದ್ದಾರೆ.
Next Story