ಯು.ಎಸ್.ಓಪನ್: ಸಿಂಧು, ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಗೆ
PV Sindhu (PTI Photo)
ಹೊಸದಿಲ್ಲಿ: ಭಾರತದ ಸ್ಟಾರ್ ಶಟ್ಲರ್ಗಳಾದ ಪಿ.ವಿ. ಸಿಂಧು ಹಾಗೂ ಲಕ್ಷ್ಯ ಸೇನ್ ನೇರ ಗೇಮ್ಗಳಿಂದ ಜಯ ದಾಖಲಿಸಿ ಯು.ಎಸ್. ಓಪನ್ ಸೂಪರ್-300 ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಡಬಲ್ ಒಲಿಂಪಿಯನ್ ಸಿಂಧು ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಕೊರಿಯಾದ ಸಂಗ್ ಶುವೊ ಯುನ್ರನ್ನು 21-14, 21-12 ಗೇಮ್ಗಳಿಂದ ಮಣಿಸಿದರು.
ಇದೇ ವೇಳೆ ಪುರುಷರ ಸಿಂಗಲ್ಸ್ನ ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಸೇನ್ ಝೆಕ್ ಗಣರಾಜ್ಯದ ಜಾನ್ ಲೋಡಾರನ್ನು 39 ನಿಮಿಷಗಳ ಹೋರಾಟದಲ್ಲಿ 21-8 ಹಾಗೂ 23-21 ಗೇಮ್ಗಳ ಅಂತರದಿಂದ ಸೋಲಿಸಿದರು.
ಇತ್ತೀಚೆಗೆ ಕೆನಡಾ ಓಪನ್ ಸೂಪರ್-500 ಟೂರ್ನಿಯನ್ನು ಜಯಿಸಿರುವ ಸೇನ್ ಮುಂದಿನ ಸುತ್ತಿನಲ್ಲಿ ಚೆನ್ನೈನ 19ರ ವಯಸ್ಸಿನ ಶಂಕರ್ ಮುತ್ತುಸ್ವಾಮಿಯವರನ್ನು ಎದುರಿಸಲಿದ್ದಾರೆ. 2022ರ ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಗಮನ ಸೆಳೆದಿದ್ದ ಮುತ್ತುಸ್ವಾಮಿ ಮತ್ತೊಂದು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಇಸ್ರೇಲ್ನ ಮಿಶಾ ಝಿಲ್ಬರ್ಮನ್ರನ್ನು 21-18, 21-23, 21-13 ಗೇಮ್ಗಳಿಂದ ಸೋಲಿಸಿದ್ದಾರೆ.
ಸಿಂಧು ಚೀನಾದ ಗಾವೊ ಫಾಂಗ್ ಜೀ ಅವರನ್ನು ಕ್ವಾರ್ಟರ್ಫೈನಲ್ನಲ್ಲಿ ಮುಖಾಮುಖಿಯಾಗಲಿದ್ದಾರೆ.