ವಿಜಯ್ ಹಝಾರೆ ಟ್ರೋಫಿ: ಮೊದಲ ಕೆಲವು ಪಂದ್ಯಗಳಿಗೆ ಹಾರ್ದಿಕ್ ಪಾಂಡ್ಯ ಅಲಭ್ಯ
ಹಾರ್ದಿಕ್ ಪಾಂಡ್ಯ | PC : @hardikpandya7
ಹೊಸದಿಲ್ಲಿ, ಡಿ.17: ಭಾರತದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವೈಯಕ್ತಿಕ ಕಾರಣದಿಂದಾಗಿ ವಿಜಯ್ ಹಝಾರೆ ಟ್ರೋಫಿಯ ಮೊದಲ ಕೆಲವು ಪಂದ್ಯಗಳಲ್ಲಿ ಆಡುವುದಿಲ್ಲ. ಪಂದ್ಯಾವಳಿಯ ಕೊನೆಯ ಹಂತದಲ್ಲಿ ಸಹೋದರ ಕೃನಾಲ್ ಪಾಂಡ್ಯ ನೇತೃತ್ವದ ಬರೋಡಾ ತಂಡವನ್ನು ಸೇರಿಕೊಳ್ಳಲಿದ್ದಾರೆ.
ತಾನು ಲಭ್ಯವಿರುವ ಸಮಯವನ್ನು ಬರೋಡಾ ತಂಡಕ್ಕೆ ಈಗಾಗಲೇ ತಿಳಿಸಿರುವ ಹಾರ್ದಿಕ್ ಅವರು ದೇಶೀಯ 50 ಓವರ್ ಟೂರ್ನಿಯಲ್ಲಿ ಆಡಲು ಬಯಸಿದ್ದಾರೆ.
ಇತ್ತೀಚೆಗೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಾಂಡ್ಯ ಅವರು 7 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಿತ 246 ರನ್ ಗಳಿಸಿದ್ದರು. ಬೌಲಿಂಗ್ನಲ್ಲಿ 6 ವಿಕೆಟ್ಗಳನ್ನು ಪಡೆದಿದ್ದು, ಬಂಗಾಳದ ವಿರುದ್ಧ 27ಕ್ಕೆ 3 ವಿಕೆಟ್ಗಳನ್ನು ಉರುಳಿಸಿದ್ದರು.
ವಿಜಯ್ ಹಝಾರೆ ಟ್ರೋಫಿಯು ಡಿ.21ರಂದು ಆರಂಭವಾಗಲಿದ್ದು, ಇ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಬರೋಡಾ ತಂಡವು ತ್ರಿಪುರಾ ತಂಡವನ್ನು ಎದುರಿಸಲಿದೆ. ಫೈನಲ್ ಪಂದ್ಯವು 2025ರ ಜನವರಿ 18ರಂದು ವಡೋದರದಲ್ಲಿ ನಡೆಯಲಿದೆ.
Next Story