ವಿರಾಟ್ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸಲು ಉನ್ನಾವೊದಿಂದ ಕಾನ್ಪುರಕ್ಕೆ ಸೈಕಲ್ನಲ್ಲಿ ಆಗಮಿಸಿದ ಶಾಲಾ ಬಾಲಕ!
PC : X \ @_shortarmjab_
ಹೊಸದಿಲ್ಲಿ: ಕಾನ್ಪುರದಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ತನ್ನ ಕ್ರಿಕೆಟ್ ಹೀರೊ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅನ್ನು ಕಣ್ತುಂಬಿಕೊಳ್ಳುವ ಏಕೈಕ ಉದ್ದೇಶದಿಂದ 58 ಕಿ.ಮೀ.ದೂರದಿಂದ ಸೈಕಲ್ನಲ್ಲಿ ಆಗಮಿಸಿರುವ ಉತ್ತರಪ್ರದೇಶದ ಉನ್ನಾವೊದ 15ರ ಹರೆಯದ ಶಾಲಾ ಬಾಲಕ ಕಾರ್ತಿಕೇಯ ಎಲ್ಲರ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬಾಲಕನ ಕತೆಯನ್ನು ಸೆರೆ ಹಿಡಿಯಲಾಗಿದೆ. ಬಾಲಕನು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯವನ್ನು ಕಣ್ಣಾರೆ ನೋಡಲು ಉನ್ನಾವೊದಿಂದ ಕಾನ್ಪುರಕ್ಕೆ ಏಕಾಂಗಿಯಾಗಿ ಸೈಕಲ್ನಲ್ಲಿ ಆಗಮಿಸಿದ್ದಾನೆ.
ಉನ್ನಾವೊದಿಂದ ಕಾನ್ಪುರಕ್ಕೆ 58 ಕಿ.ಮೀ. ಪಯಣವನ್ನು ಪೂರ್ಣಗೊಳಿಸಲು ಕಾರ್ತಿಕೇಯ 7 ಗಂಟೆ ತೆಗೆದುಕೊಂಡಿದ್ದಾರೆ. ಬೆಳಗ್ಗೆ 4 ಗಂಟೆಗೆ ತನ್ನ ಮನೆಯಿಂದ ಹೊರಟಿರುವ ಬಾಲಕ ಬೆಳಗ್ಗಿನ ಜಾವ ಕತ್ತಲಲ್ಲಿ ಸೈಕಲ್ ತುಳಿಯಲಾರಂಭಿಸಿದ್ದಾನೆ. ಬೆಳಗ್ಗೆ 11 ಗಂಟೆಗೆ ಗ್ರೀನ್ಪಾರ್ಕ್ ಕ್ರೀಡಾಂಗಣಕ್ಕೆ ತಲುಪಿದ್ದಾನೆ.
A 15-year-old kid rode 58 kilometers on his bicycle just to watch Virat Kohli bat pic.twitter.com/rigqQBoCHq
— A (@_shortarmjab_) September 27, 2024
ಮಂದಬೆಳಕು ಹಾಗೂ ಭಾರೀ ಮಳೆಯಿಂದಾಗಿ 2ನೇ ಟೆಸ್ಟ್ನ ಮೊದಲ ದಿನದಾಟದಲ್ಲಿ 35 ಓವರ್ಗಳ ಪಂದ್ಯ ಆಡಲು ಸಾಧ್ಯವಾಗಿದೆ. ಪಂದ್ಯವು ಬೇಗನೆ ಕೊನೆಗೊಂಡಾಗ ಬಾಂಗ್ಲಾದೇಶವು 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿದೆ.