ಆರು ವರ್ಷಗಳ ನಂತರ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಕೊಹ್ಲಿ
Photo:X/@ICC
ಪುಣೆ: ಸುಮಾರು ಆರು ವರ್ಷಗಳ ನಂತರ ಮೊದಲ ಬಾರಿಗೆ ಏಕದಿನ ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ಬೌಲಿಂಗ್ ಮಾಡಲು ವಿರಾಟ್ ಕೊಹ್ಲಿಯನ್ನು ಕಳಿಸಿದ ವಿದ್ಯಮಾನ ಪುಣೆಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ವಿಶ್ವ ಕಪ್ ಪಂದ್ಯಾವಳಿಯಲ್ಲಿ ನಡೆದಿದೆ. ಹಾರ್ದಿಕ್ ಪಾಂಡ್ಯ ಅವರ ಅಪೂರ್ಣ ಓವರ್ ಪೂರ್ಣಗೊಳಿಸಲು ಕೊಹ್ಲಿ ಅವರಿಗೆ ತಿಳಿಸಲಾಯಿತು.
ಎಡಗಾಲಿನಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಂದ್ಯದ ಒಂಬತ್ತನೇ ಓವರ್ ಬೌಲ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಓವರ್ ಪೂರ್ಣಗೊಳಿಸಲಾಗಲಿಲ್ಲ. ಈ ಕಾರಣ ಆ ಓವರ್ನ ಕೊನೆಯ ಮೂರು ಬಾಲ್ ಬೌಲ್ ಮಾಡಲು ಕೊಹ್ಲಿ ಅವರಿಗೆ ಸೂಚಿಸಲಾಯತು.
ಕೊಹ್ಲಿ ಈ ಹಿಂದೆ ಆಗಸ್ಟ್ 2017ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದರು.
ಇದಕ್ಕೂ ಮೊದಲು 2011ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾಗೂ 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಕೊಹ್ಲಿ ಬೌಲ್ ಮಾಡಿದ್ದರು.
Virat Kohli The Bowler Bowling Right arm quick bowling for India #INDvsBANpic.twitter.com/21gST0kuHC
— ANSH. (@KohliPeak) October 19, 2023