ಸಚಿನ್ ತೆಂಡುಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
ವೇಗವಾಗಿ 27,000 ಅಂತರ್ರಾಷ್ಟ್ರೀಯ ರನ್
ವಿರಾಟ್ ಕೊಹ್ಲಿ | PC : PTI
ಕಾನ್ಪುರ : ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ಬಾಂಗ್ಲಾದೇಶ ವಿರುದ್ಧ ಸೋಮವಾರ ನಡೆದ ಎರಡನೇ ಟೆಸ್ಟ್ನ 4ನೇ ದಿನದಾಟದಲ್ಲಿ ವೇಗವಾಗಿ 27,000 ಅಂತರ್ರಾಷ್ಟ್ರೀಯ ರನ್ ಗಳಿಸಿದ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಕೇವಲ 594 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಲು ಶಕ್ತರಾದ ಕೊಹ್ಲಿ ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಅವರ ದಾಖಲೆ(623 ಇನಿಂಗ್ಸ್)ಯನ್ನು ಮುರಿದರು.
ಕೊಹ್ಲಿ ಅವರು 600 ಇನಿಂಗ್ಸ್ನೊಳಗೆ 27,000 ಅಂತರ್ರಾಷ್ಟ್ರೀಯ ರನ್ ಗಳಿಸಿದ ಏಕೈಕ ಕ್ರಿಕೆಟಿಗನಾಗಿದ್ದಾರೆ. ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಗೂ ಶ್ರೀಲಂಕಾದ ದಂತಕತೆ ಕುಮಾರ ಸಂಗಕ್ಕರ ಈ ಸಾಧನೆ ಮಾಡಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ.
Kohli goes down the ground #IDFCFirstBankTestSeries #INDvBAN #JioCinemaSports #ViratKohli pic.twitter.com/2nrlZbg3aT
— JioCinema (@JioCinema) September 30, 2024
ವೇಗವಾಗಿ 27,000 ಅಂತರ್ರಾಷ್ಟ್ರೀಯ ರನ್ ಗಳಿಸಿದ ಆಟಗಾರರು
594 ಇನಿಂಗ್ಸ್-ವಿರಾಟ್ ಕೊಹ್ಲಿ
623 ಇನಿಂಗ್ಸ್-ಸಚಿನ್ ತೆಂಡುಲ್ಕರ್
648 ಇನಿಂಗ್ಸ್-ಕುಮಾರ ಸಂಗಕ್ಕರ
650 ಇನಿಂಗ್ಸ್-ರಿಕಿ ಪಾಂಟಿಂಗ್