ಐಪಿಎಲ್ನಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ
PC : X/ @adheeraeditz
·
ಹೊಸದಿಲ್ಲಿ : ಆರ್ಸಿಬಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 10 ವಿವಿಧ ಆವೃತ್ತಿಗಳಲ್ಲಿ ಒಂದೇ ಋತುವಿನಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.
ಕೊಹ್ಲಿ ಇದೀಗ ಸಹ ಆಟಗಾರ ಸುರೇಶ್ ರೈನಾ, ಶಿಖರ್ ಧವನ್ ಹಾಗೂ ಆಸ್ಟ್ರೇಲಿಯದ ಬ್ಯಾಟಿಂಗ್ ಸ್ಟಾರ್ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದರು. ಈ ಮೂವರು ಬ್ಯಾಟರ್ಗಳು ಐಪಿಎಲ್ ವೃತ್ತಿಬದುಕಿನಲ್ಲಿ 9 ಬಾರಿ ಒಂದೇ ಋತುವಿನಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 7 ಆವೃತ್ತಿಗಳಲ್ಲಿ 400 ಪ್ಲಸ್ ಸ್ಕೋರ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷವಲ್ಲದೆ, 2023, 2021, 2020, 2019, 2018, 2016, 2015, 2013 ಹಾಗೂ 2011ರಲ್ಲಿ ಈ ಸಾಧನೆ ಮಾಡಿದ್ದರು. 2016ರಲ್ಲಿ 4 ಶತಕ, 7 ಅರ್ಧಶತಕಗಳ ಸಹಿತ ಒಟ್ಟು 973 ರನ್ ಗಳಿಸಿದ್ದರು. ಈ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
Next Story