13 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವಿರಾಟ್ ಕೊಹ್ಲಿ ಗೈರು: ಆರ್ಸಿಬಿ ಟ್ವೀಟ್

ಕೊಹ್ಲಿ | Photo: X \ @RCBTweets
ಹೊಸದಿಲ್ಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂಗ್ಲೆಂಡ್ ವಿರುದ್ಧದ ಕೊನೆಯ 3 ಪಂದ್ಯಗಳಿಗೆ ಶನಿವಾರ ಬೆಳಗ್ಗೆ ಪ್ರಕಟಿಸಿರುವ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರಿಲ್ಲ. ಕೊಹ್ಲಿ ಅನುಪಸ್ಥಿತಿಯು ಸರಣಿಯ ಇನ್ನುಳಿದ ಪಂದ್ಯದಲ್ಲೂ ಕಾಡಲಿದೆ.
ಈ ಘೋಷಣೆಯ ನಂತರ ವಿರಾಟ್ ಕೊಹ್ಲಿ ಪ್ರತಿನಿಧಿಸುತ್ತಿರುವ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾರತವು 13 ವರ್ಷಗಳ ನಂತರ ಇದೇ ಮೊದಲ ಬಾರಿ ವಿರಾಟ್ ಕೊಹ್ಲಿ ಅವರಿಲ್ಲದೆ ಟೆಸ್ಟ್ ಸರಣಿಯನ್ನಾಡುತ್ತಿದೆ ಎಂದು ಬೆಟ್ಟು ಮಾಡಿದೆ.
13 ವರ್ಷಗಳಲ್ಲಿ ಇದೇ ಮೊದಲ ಬಾರಿ ವಿರಾಟ್ ಕೊಹ್ಲಿ ಅವರಿಲ್ಲದೆ ಭಾರತ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ದೇಶವು ನಿಮ್ಮೊಂದಿಗಿದೆ. ನೀವು ಹಿಂತಿರುಗಲು ಸಿದ್ಧರಾದಾಗಲೆಲ್ಲಾ ನಿಮ್ಮ ಆಸನವನ್ನು ನಿಮಗಾಗಿ ಕಾಯ್ದಿರಿಸಲಾಗಿದೆ ಎಂದು ಆರ್ಸಿಬಿ ಪೋಸ್ಟ್ ಮಾಡಿದೆ.
ಕುಟುಂಬ ಯಾವಾಗಲೂ ಅತ್ಯಂತ ಪ್ರಮುಖ ಆದ್ಯತೆಯಾಗಿರುತ್ತದೆ. ವಿರಾಟ್ ಕೊಹ್ಲಿ ಅವರು ವಿಶ್ರಾಂತಿ ಪಡೆದು, ಕುಟುಂಬದೊಂದಿಗೆ ಕೆಲವು ಅಮೂಲ್ಯ ಸಮಯ ಕಳೆಯಲು ಬಯಸಿದರೆ ಅದರಲ್ಲಿ ನನಗೆ ಯಾವುದೇ ಸಮಸ್ಯೆ ಇದ್ದಂತೆ ಕಾಣುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾದ ವೇಗದ ದಂತಕತೆ ಡೇಲ್ ಸ್ಟೇಯ್ನ್ ಹೇಳಿದ್ದಾರೆ.
The first Test series in 13 years without Virat Kohli.
— Royal Challengers Bangalore (@RCBTweets) February 10, 2024
The nation is with you, and your seat remains reserved whenever you’re ready to return, King. ❤️#PlayBold #INDvENG #TeamIndia @imVkohli pic.twitter.com/fxOgLIlhWL