ದಿಲ್ಲಿ-ರೈಲ್ವೇಸ್ ರಣಜಿ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಕೊಹ್ಲಿ ಅಭಿಮಾನಿ

ವಿರಾಟ್ ಕೊಹ್ಲಿ | PC : X
ಹೊಸದಿಲ್ಲಿ: 13 ವರ್ಷಗಳ ನಂತರ ವಿರಾಟ್ ಕೊಹ್ಲಿ ರಣಜಿ ಪಂದ್ಯಕ್ಕೆ ಮರಳಿದ್ದು, ದೊಡ್ಡ ಪ್ರಮಾಣದ ಅಭಿಮಾನಿಗಳಿಂದ ಅರುಣ್ ಜೇಟ್ಲಿ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು. ಪಂದ್ಯದ ಓರ್ವ ಅಭಿಮಾನಿ ದಿಢೀರನೆ ಮೈದಾನಕ್ಕೆ ನುಗ್ಗುವ ಮೂಲಕ ಭದ್ರತಾ ವ್ಯವಸ್ಥೆಯನ್ನು ಭೇದಿಸಿದ್ದು, ಕ್ಷಣ ಕಾಲ ಕ್ರೀಡಾಂಗಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮೈದಾನಕ್ಕೆ ನುಗ್ಗಿದ ಅಭಿಮಾನಿಯು ನೆಲಕ್ಕೆ ಮೊಣಕಾಲೂರಿ ವಿರಾಟ್ ಕೊಹ್ಲಿಯ ಪಾದಕ್ಕೆ ನಮಸ್ಕಾರವನ್ನೂ ಮಾಡಿದರು. ಆದರೆ, ಆತನ ಹಿಂದೆಯೇ ಓಡಿ ಬಂದಿದ್ದ ಭದ್ರತಾ ಸಿಬ್ಬಂದಿಗಳು ಆತನನ್ನು ಸೆರೆ ಹಿಡಿದು, ಮೈದಾನದಿಂದ ಹೊರಗೆ ಕರೆದೊಯ್ದರು.
ಕೈಜೋಡಿಸಿದ ಸ್ಥಿತಿಯಲ್ಲಿ ಆ ಅಭಿಮಾನಿಯು ಮೈದಾನಕ್ಕೆ ಧಾವಿಸಿದ್ದರಿಂದ ಕೆಲ ಕಾಲ ಆಟಕ್ಕೆ ಅಡಚಣೆಯೂ ಉಂಟಾಯಿತು. ಟಾಸ್ ಗೆದ್ದು ದಿಲ್ಲಿ ತಂಡವು ಫೀಲ್ಡಿಂಗ್ ಅನ್ನು ಆಯ್ದುಕೊಂಡಿದ್ದರಿಂದ, ವಿರಾಟ್ ಕೊಹ್ಲಿಯನ್ನು ಸ್ಲಿಪ್ ನಲ್ಲಿ ಫೀಲ್ಡಿಂಗ್ ಗೆ ನಿಯೋಜಿಸಲಾಗಿತ್ತು.
ಭದ್ರತಾ ವ್ಯವಸ್ಥೆಯನ್ನು ಭೇದಿಸಿದ ಅಭಿಮಾನಿಯು, ಮೈದಾನಕ್ಕೆ ಧಾವಿಸಿ ವಿರಾಟ್ ಕೊಹ್ಲಿಯ ಪಾದಕ್ಕೆ ನಮಸ್ಕರಿಸಿದ್ದರಿಂದ, ಕ್ರೀಡಾಂಗಣದಲ್ಲಿ ಕ್ಷಣ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಅದರ ಬೆನ್ನಿಗೇ ಭದ್ರತಾ ಸಿಬ್ಬಂದಿಗಳು ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದರು.
ಈ ಘಟನೆಯಲ್ಲಿ ವಿರಾಟ್ ಕೊಹ್ಲಿಗೆ ಯಾವುದೇ ಅಪಾಯವಾಗದಿದ್ದರೂ, ಇಂತಹ ಘಟನೆಗಳಿಂದ ಆಟಗಾರರಿಗೆ ಅಪಾಯವಾಗುವ ಸಾಧ್ಯತೆಯೂ ಇದೆ.