ಅಂಡರ್ 23 ಕುಸ್ತಿ ವಿಶ್ವ ಚಾಂಪಿಯನ್ಶಿಪ್ | ಭಾರತದ ವಿಶ್ವಜೀತ್ ಮೋರೆಗೆ ಕಂಚು
ವಿಶ್ವಜೀತ್ ಮೋರೆ | PC : X \ @SportsArena1234
ಹೊಸದಿಲ್ಲಿ : ಅಲ್ಬನಿಯಾದಲ್ಲಿ ನಡೆದ 23 ವರ್ಷದೊಳಗಿನವರ ಕುಸ್ತಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ವಿಶ್ವಜೀತ್ ಮೋರೆ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟರು.
ಬುಧವಾರ ನಡೆದ ಪುರುಷರ 55 ಕೆಜಿ ಗ್ರೀಕೊ-ರೋಮನ್ ವಿಭಾಗದಲ್ಲಿ ವಿಶ್ವಜೀತ್ ಕಂಚಿನ ಪದಕ ಜಯಿಸಿದ್ದಾರೆ.
ರೋಚಕ ಹಣಾಹಣಿಯಲ್ಲಿ ವಿಶ್ವಜೀತ್ ಅವರು ಆಡಮ್ ಉಲ್ಬಶೆವ್ರನ್ನು 14-10 ಅಂತರದಿಂದ ಮಣಿಸಿದರು. ಈ ಸಾಧನೆಯ ಮೂಲಕ ಭಾರತವು ಪ್ರಸಕ್ತ ಚಾಂಪಿಯನ್ಶಿಪ್ನಲ್ಲಿ ಮೊದಲ ಪದಕ ತನ್ನದಾಗಿಸಿಕೊಂಡಿತು.
ಅಲಿ ಅಬ್ದುಲ್ಲಾ ಅಹ್ಮದ್ ಚಿನ್ನದ ಪದಕ ಜಯಿಸಿದರೆ, ಕೊಹೆಲ್ ಯಮಗಿವಾ ಅವರು ಮೋರೆ ಜೊತೆ ಕಂಚಿನ ಪದಕ ಹಂಚಿಕೊಂಡರು.
ಸೆಮಿ ಫೈನಲ್ನಲ್ಲಿ ಅಲಿ ಅಬ್ದುಲ್ಲಾ ವಿರುದ್ಧ ಆರಂಭಿಕ ಮುನ್ನಡೆ ಪಡೆದ ಹೊರತಾಗಿಯೂ ವಿಶ್ವಜೀತ್ ಮೋರೆ 5-14 ಅಂತರದಿಂದ ಸೋತಿದ್ದರು.
ಇದಕ್ಕೂ ಮೊದಲು ನಡೆದ ಸ್ಪರ್ಧೆಗಳಲ್ಲಿ ಅಂಜಲಿ ಮಹಿಳೆಯರ 59 ಕೆಜಿ ವಿಭಾಗದಲ್ಲಿ ಫೈನಲ್ಗೆ ಪ್ರವೇಶಿಸಿದರು. ಸೆಮಿ ಫೈನಲ್ನಲ್ಲಿ ಇಟಲಿಯ ಅರೋರಾ ರುಸ್ಸೊರನ್ನು 4-0 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದರು. ಅಂಜಲಿ ಫೈನಲ್ನಲ್ಲಿ ಉಕ್ರೇನ್ನ ಸೊಲಿಮಿಯಾ ವಿನಿಕ್ರನ್ನು ಎದುರಿಸಲಿದ್ದಾರೆ.