ಭಾರತ ವಿರುದ್ಧ ಇಂಗ್ಲೆಂಡ್ ತಂಡವು ವಿಕೆಟ್ ನಷ್ಟವಿಲ್ಲದೆ ಐದು ರನ್ನೊಂದಿಗೆ ಇನಿಂಗ್ಸ್ ಆರಂಭಿಸಿರುವುದೇಕೆ?
Photo:X/@englandcricket
ರಾಜ್ಕೋಟ್: ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಮತ್ತೊಬ್ಬ ಬ್ಯಾಟರ್ ತಪ್ಪೆಸಗಿದ್ದು, ಪಿಚ್ ಮಧ್ಯಭಾಗದಲ್ಲಿ ಓಡಿದ್ದರಿಂದ ಭಾರತ ತಂಡ ಐದು ರನ್ ದಂಡ ತೆರುವಂತಾಗಿದೆ.
ಹೀಗಾಗಿ ತನ್ನ ಇನಿಂಗ್ಸ್ ಪ್ರಾರಂಭಿಸಲಿರುವ ಇಂಗ್ಲೆಂಡ್ ತಂಡವು ಒಂದೂ ಬಾಲನ್ನು ಎದುರಿಸದೆ, ಐದು ರನ್ಗಳ ಮೊತ್ತದೊಂದಿಗೆ ಕಣಕ್ಕೆ ಇಳಿದಿದೆ.
ಪಿಚ್ ಮಧ್ಯಭಾಗದಲ್ಲಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಓಡಿದ್ದರಿಂದ ಭಾರತ ತಂಡಕ್ಕೆ ಐದು ರನ್ ದಂಡ ವಿಧಿಸಲಾಗಿದೆ.
ಮೈದಾನದ ಅಂಪೈರ್ ಆದ ಜೋಯೆಲ್ ವಿಲ್ಸನ್ ಅಶ್ವಿನ್ರನ್ನು ಈ ತಪ್ಪಿಗಾಗಿ ತರಾಟೆಗೆ ತೆಗೆದುಕೊಂಡರು.
ಎರಡನೆ ದಿನದಾಟದ 102ನೇ ಓವರ್ನ ಮೂರನೆ ಬಾಲ್ ಸಂದರ್ಭದಲ್ಲಿ ಪಿಚ್ ಮಧ್ಯಭಾಗದಲ್ಲಿ ಓಡಿದ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಅಂಪೈರ್ ಜೋಯೆಲ್ ವಿಲ್ಸನ್ ಮಾತನಾಡುತ್ತಿರುವುದು ಕಂಡು ಬಂದಿತು. ಇದೇ ತಪ್ಪನ್ನು ಈ ಹಿಂದೆ ರವೀಂದ್ರ ಜಡೇಜಾ ಕೂಡಾ ಮಾಡಿದ್ದರು.
Next Story