ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವುದೇ ಸನ್ರೈಸರ್ಸ್ ಹೈದರಾಬಾದ್ ?

PC | X/@SunRisers
ಹೊಸದಿಲ್ಲಿ: ಸನ್ರೈಸರ್ಸ್ ಹೈದರಾಬಾದ್ ತಂಡವು ಮಾ.23ರಂದು ಹೈದರಾಬಾದ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುವ ಮೂಲಕ 2025ರ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
ಸ್ಪೋಟಕ ಆರಂಭಿಕ ಸರದಿ ಹಾಗೂ ವಿಶ್ವಾಸಾರ್ಹ ಬೌಲಿಂಗ್ ವಿಭಾಗವನ್ನು ಹೊಂದಿರುವ ಹೈದರಾಬಾದ್ ತಂಡವು ಐಪಿಎಲ್ 2025ರ ಉದ್ದಕ್ಕೂ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಳ್ಳುವುದೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ನಾಯಕ: ಪ್ಯಾಟ್ ಕಮಿನ್ಸ್
ಕೋಚ್: ಡೇನಿಯಲ್ ವೆಟೋರಿ
ತವರು ಮೈದಾನ: ರಾಜೀವ್ ಗಾಂಧಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್, ಹೈದರಾಬಾದ್
ಶ್ರೇಷ್ಠ ಸಾಧನೆ: ಚಾಂಪಿಯನ್(ಡೆಕ್ಕನ್ ಚಾರ್ಜರ್ಸ್ 2009, 2016)
ಕಳೆದ ಆವೃತ್ತಿಯ ಸಾಧನೆ: ರನ್ನರ್-ಅಪ್
ಅಂಕಿ-ಅಂಶ
1.ಸ್ಫೋಟಕ ಆರಂಭಿಕ ಜೋಡಿ
ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ 2024ರ ನಂತರ ಟಿ20 ಕ್ರಿಕೆಟ್ನಲ್ಲಿ 13.46ರ ರನ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಈ ಜೋಡಿಯು 2024ರ ಐಪಿಎಲ್ ಟೂರ್ನಿಯಲ್ಲಿ 49.35ರ ಸರಾಸರಿಯಲ್ಲಿ 691 ರನ್ ಗಳಿಸಿದೆ. 2016ರ ನಂತರ ಮೊದಲ ಬಾರಿ ಪ್ರಶಸ್ತಿ ಗೆಲ್ಲಲು ಹೈದರಾಬಾದ್ ತಂಡವು ಈ ಜೋಡಿಯನ್ನೇ ಹೆಚ್ಚು ನಂಬಿಕೊಂಡಿದೆ.
2. ಸ್ಪಿನ್ ಬೌಲರ್ ವಿರುದ್ದ ಕ್ಲಾಸೆನ್ ‘ಕ್ಲಾಸಿಕ್’
ಹೆನ್ರಿಕ್ ಕ್ಲಾಸೆನ್ ಅವರು 2022ರ ನಂತರ ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ವಿರುದ್ಧ 163.16ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಸ್ಪಿನ್ನರ್ಗಳ ವಿರುದ್ಧ ಕನಿಷ್ಠ 1000 ರನ್ ಗಳಿಸಿದ ಬ್ಯಾಟರ್ಗಳ ಪೈಕಿ ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್ವೆಲ್ ನಂತರ ಎರಡನೇ ಶ್ರೇಷ್ಠ ಸಾಧನೆ ಇದಾಗಿದೆ. ಸ್ಪಿನ್ನರ್ಗಳ ಎದುರು ಪ್ರಾಬಲ್ಯ ಸಾಧಿಸುವ ಕ್ಲಾಸೆನ್ ಸಾಮರ್ಥ್ಯವು ಮಧ್ಯಮ ಓವರ್ಗಳಲ್ಲಿ ಹೈದರಾಬಾದ್ ತಂಡದ ಯಶಸ್ಸಿಗೆ ಪ್ರಮುಖ ಅಂಶವಾಗಲಿದೆ. ಹಿಂದಿನ ಆವೃತ್ತಿಯ ಐಪಿಎಲ್ನಲ್ಲಿ ಕ್ಲಾಸೆನ್ ಅವರು ಸ್ಪಿನ್ನರ್ಗಳ ವಿರುದ್ಧ 182.11ರ ಸ್ಟ್ರೈಕ್ರೇಟ್ನಲ್ಲಿ 224 ರನ್ ಹಾಗೂ 2023ರಲ್ಲಿ 264 ರನ್ ಗಳಿಸಿದ್ದಾರೆ.
3. ಶಮಿ ಪವರ್ಪ್ಲೇ ಪ್ರಾಬಲ್ಯ
2022ರ ಆರಂಭದಿಂದ ಮುಹಮ್ಮದ್ ಶಮಿ ಅವರು ಐಪಿಎಲ್ ಬೌಲರ್ಗಳ ಪೈಕಿ ಪವರ್ಪ್ಲೇ ವೇಳೆ ಶ್ರೇಷ್ಠ ಬೌಲಿಂಗ್ ಸರಾಸರಿ(21.25)ದಾಖಲಿಸಿದ್ದಾರೆ. ಈ ಅವಧಿಯಲ್ಲಿ ಟ್ರೆಂಟ್ ಬೌಲ್ಟ್(32)ಮಾತ್ರ ಪವರ್ಪ್ಲೇ ಅವಧಿಯಲ್ಲಿ ಶಮಿ(28)ಗಿಂತ ಹೆಚ್ಚು ವಿಕೆಟ್ಗಳನ್ನು ಪಡೆದಿದ್ದಾರೆ. ಹೈದರಾಬಾದ್ ತಂಡ ಆರಂಭಿಕ ವಿಕೆಟ್ ಪಡೆಯಲು ಶಮಿ ಅವರನ್ನು ಹೆಚ್ಚು ಅವಲಂಬಿಸಿದೆ. ಶಮಿ ಅವರನ್ನು ನಾಯಕ ಕಮಿನ್ಸ್ ಹೇಗೆ ಬಳಸಿಕೊಳ್ಳುತ್ತಾರೆನ್ನುವುದು ಕುತೂಹಲಕಾರಿ ವಿಚಾರವಾಗಿದೆ.
ಸಂಭಾವ್ಯ ಆಡುವ 11ರ ಬಳಗ
ಅಗ್ರ ಸರದಿ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್
ಮಧ್ಯಮ ಸರದಿ ಹಾಗೂ ಆಲ್ರೌಂಡರ್ಗಳು: ನಿತಿಶ್ ಕುಮಾರ್ ರೆಡ್ಡಿ, ಹೆನ್ರಿಕ್ ಕ್ಲಾಸೆನ್, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್.
ಬೌಲರ್ಗಳು: ಹರ್ಷಲ್ ಪಟೇಲ್, ಮುಹಮ್ಮದ್ ಶಮಿ, ರಾಹುಲ್ ಚಹಾರ್, ಆಡಮ್ ಝಂಪಾ.
ಇಂಪ್ಯಾಕ್ಟ್ ಪ್ಲೇಯರ್: ಸಚಿನ್ ಬೇಬಿ, ಸಿಮ್ರಾನ್ಜೀತ್ ಸಿಂಗ್