ವಿಂಬಲ್ಡನ್: ಗ್ರಾನ್ಸ್ಲಾಮ್ನಲ್ಲಿ 35ನೇ ಬಾರಿ ಫೈನಲ್ಗೆ ತಲುಪಿ ಇತಿಹಾಸ ಬರೆದ ಜೊಕೊವಿಕ್
ಫೋಟೋ: Twitter@ Wimbledon
Wimbledon
ಲಂಡನ್, ಜು.14: ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಫೈನಲ್ ತಲುಪಿದ್ದಾರೆ. ಗ್ರಾನ್ಸ್ಲಾಮ್ನಲ್ಲಿ 35ನೇ ಬಾರಿ ಫೈನಲ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡಿರುವ ಜೊಕೊವಿಕ್ ಇತಿಹಾಸ ನಿರ್ಮಿಸಿದರು.
ಈ ಗೆಲುವಿನ ಮೂಲಕ ಸತತ 5ನೇ ವಿಂಬಲ್ಡನ್ ಪ್ರಶಸ್ತಿ ಜಯಿಸಿ ರೋಜರ್ ಫೆಡರರ್ ದಾಖಲೆ ಸರಿಗಟ್ಟುವತ್ತ ಹೆಜ್ಜೆ ಇಟ್ಟಿದ್ದಾರೆ.
ಶುಕ್ರವಾರ ನಡೆದ ಸೆಮಿ ಫೈನಲ್ನಲ್ಲಿ ಜೊಕೊವಿಕ್ ಇಟಲಿಯ ಜೆನ್ನಿಕ್ ಸಿನ್ನೆರ್ರನ್ನು 6-3, 6-4, 7-6(4) ನೇರ ಸೆಟ್ಗಳ ಅಂತರದಿಂದ ಸೋಲಿಸಿ 9ನೇ ಬಾರಿ ವಿಂಬಲ್ಡನ್ನಲ್ಲಿ ಫೈನಲ್ ತಲುಪಿದರು.
ಸರ್ಬಿಯದ ಸೂಪರ್ ಸ್ಟಾರ್ 24ನೇ ಗ್ರಾನ್ಸ್ಲಾಮ್ ಪ್ರಶಸ್ತಿ ಜಯಿಸಿ ನಂ.1 ಸ್ಥಾನ ವಶಪಡಿಸಿಕೊಳ್ಳುವುದಕ್ಕೆ ಇನ್ನೊಂದು ಹೆಜ್ಜೆ ಇಡಬೇಕಾಗಿದೆ.
Next Story