ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ | ಎಂ.ಎಸ್. ಧೋನಿ ಪಾಲ್ಗೊಳ್ಳಲು ಬಿಸಿಸಿಐ ನಿಯಮ ಅಡ್ಡಿ
ಎಂ.ಎಸ್. ಧೋನಿ | PC : PTI
ಹೊಸದಿಲ್ಲಿ: ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ ನಲ್ಲಿ ಸುರೇಶ್ ರೈನಾ, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಸಹಿತ ಭಾರತದ ಹಲವು ಮಾಜಿ ಕ್ರಿಕೆಟ್ ಸ್ಟಾರ್ಗಳು ಇಂಡಿಯಾ ಚಾಂಪಿಯನ್ಸ್ ತಂಡದ ಪರ ಆಡಲಿದ್ದಾರೆ.
ಬಿಸಿಸಿಐ ನಿಯಮ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಟೂರ್ನಮೆಂಟ್ನಲ್ಲಿ ಭಾಗವಹಿಸುವುದಿಲ್ಲ. ಧೋನಿ 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದರೂ ಬಿಸಿಸಿಐ ನಿಗದಿಪಡಿಸಿರುವ ನಿಯಮಗಳು ಐಪಿಎಲ್ ಆಟಗಾರರು ಇತರ ಲೀಗ್ಗಳಲ್ಲಿ ಅಡುವುದನ್ನು ನಿರ್ಬಂಧಿಸುತ್ತದೆ.
ಐಪಿಎಲ್ ನ ಸಕ್ರಿಯ ಆಟಗಾರನಾಗಿರುವ ಧೋನಿ ಈ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಿದ್ದರು. ಈ ವರ್ಷದ ಐಪಿಎಲ್ನಲ್ಲಿ ಸಿಎಸ್ಕೆ ಪರ 14 ಪಂದ್ಯಗಳಲ್ಲಿ 220ರ ಸ್ಟ್ರೈಕ್ರೇಟ್ನಲ್ಲಿ ಒಟ್ಟು 161 ರನ್ ಗಳಿಸಿದ್ದರು.
ಧೋನಿ ತನ್ನ ಮಾಜಿ ಆಟಗಾರರಾದ ರೈನಾ, ಯುವರಾಜ್ ಹಾಗೂ ಹರ್ಭಜನ್ರೊಂದಿಗೆ ಮೈದಾನದಲ್ಲಿ ಒಟ್ಟಿಗೆ ಆಡುವುದನ್ನು ನೋಡುವುದರಿಂದ ಅಭಿಮಾನಿಗಳು ವಂಚಿತರಾಗಲಿದ್ದಾರೆ.
ಇಂಡಿಯಾ ಚಾಂಪಿಯನ್ಸ್ ತಂಡ: ರಾಬಿನ್ ಉತ್ತಪ್ಪ, ನಮನ್ ಓಜಾ(ವಿಕೆಟ್ ಕೀಪರ್), ಸುರೇಶ್ ರೈನಾ, ಯುವರಾಜ್ ಸಿಂಗ್(ನಾಯಕ), ಗುರುಕೀರತ್ ಸಿಂಗ್ ಮಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ವಿನಯ್ ಕುಮಾರ್, ಹರ್ಭಜನ್ ಸಿಂಗ್, ಧವಳ್ ಕುಲಕರ್ಣಿ, ರಾಹುಲ್ ಶುಕ್ಲಾ, ಆರ್ ಪಿ ಸಿಂಗ್, ಸೌರಭ್ ತಿವಾರಿ, ಅನುರೀತ್ ಸಿಂಗ್, ರಾಹುಲ್ ಶರ್ಮಾ, ಅಂಬಟಿ ರಾಯುಡು, ಪವನ್ ನೇಗಿ.