ವರ್ಲ್ಡ್ ಚೆಸ್ ಚಾಂಪಿಯನ್ಶಿಪ್ : ಚೀನಾದ ಲಿರೆನ್ ವಿರುದ್ಧ ಡ್ರಾ ಸಾಧಿಸಿದ ಗುಕೇಶ್
ಡಿಂಗ್ ಲಿರೆನ್ , ಡಿ.ಗುಕೇಶ್ | PTI
ಕೌಲಾಲಂಪುರ : ಸಿಂಗಾಪುರದಲ್ಲಿ ಶನಿವಾರ ನಡೆದ ಫಿಡೆ ವರ್ಲ್ಡ್ ಚೆಸ್ ಚಾಂಪಿಯನ್ಶಿಪ್ನ ಐದನೇ ಸುತ್ತಿನ ಪಂದ್ಯದಲ್ಲಿ ವಿಶ್ವದ ಕಿರಿಯ ವಿಶ್ವ ಚಾಂಪಿಯನ್ಶಿಪ್ ಚಾಲೆಂಜರ್, ಭಾರತದ ಡಿ.ಗುಕೇಶ್ ಅವರು ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಡ್ರಾ ಸಾಧಿಸಿದರು.
ಮೊದಲ ಐದು ಸುತ್ತುಗಳ ನಂತರ ವರ್ಲ್ಡ್ ಚಾಂಪಿಯನ್ಶಿಪ್ ಸಿರೀಸ್ 2.5-2.5ರಿಂದ ಡ್ರಾನಲ್ಲಿ ಕೊನೆಗೊಂಡಿತು.
ಪ್ರಸಕ್ತ ವಿಶ್ವ ಚಾಂಪಿಯನ್ಶಿಪ್ನಲ್ಲಿ ಒಟ್ಟು 14 ಸುತ್ತುಗಳಿದ್ದು, ಮೊದಲಿಗೆ 7.5 ಪಾಯಿಂಟ್ಸ್ ತಲುಪುವ ಚೆಸ್ ಪಟು ವಿಶ್ವ ಚಾಂಪಿಯನ್ ಕಿರೀಟ ಧರಿಸಲಿದ್ದಾರೆ.
2022ರಲ್ಲಿ ರಶ್ಯದ ಇಯಾನ್ ನೆಪೋಮ್ನಿಯಾಚಿ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದರು.
Next Story