ವಿಶ್ವಕಪ್: ನೆದರ್ಲ್ಯಾಂಡ್ಸ್ ವಿರುದ್ಧ ಆರಂಭಿಕ ಮೂರು ವಿಕೆಟ್ ಕಳೆದುಕೊಂಡ ಭಾರತ
ರೋಹಿತ್, ಗಿಲ್, ಕೊಹ್ಲಿ, ಅಯ್ಯರ್ ಅರ್ಧಶತಕ
Photo credit: cricketworldcup.com
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನೆದರ್ಲ್ಯಾಂಡ್ಸ್ ವಿರುದ್ದದ ಪಂದ್ಯದಲ್ಲಿ ಭಾರತ ಆರಂಭಿಕ ಮೂವರು ಬ್ಯಾಟರ್ ಗಳ ಆಕರ್ಷಕ ಅರ್ಧಶತಕದ ನೆರವಿನಿಂದ 200 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದೆ.
ಡಚ್ಚರ ವಿರುದ್ದ ಟಾಸ್ ಗೆದ್ದ ರೋಹಿತ್ ಪಡೆ ಬ್ಯಾಟಿಂಗ್ ಆಯ್ದುಕೊಂಡು ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ರೋಹಿತ್ ಶರ್ಮಾ 8 ಬೌಂಡರಿ 2 ಸಿಕ್ಸರ್ ಸಹಿತ 61 ರನ್ ಪೇರಿಸಿದರೆ , ಶುಬ್ ಮನ್ ಗಿಲ್ 3 ಬೌಂಡರಿ 4 ಭರ್ಜರಿ ಸಿಕ್ಸರ್ ನೆರವಿನಿಂದ 51 ರನ್ ಪೇರಿಸಿ ಕ್ರಮವಾಗಿ ಬಾಸ್ ಡೆ ಲೀಡ್ ಹಾಗೂ ಮೀಕರನ್ ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ 51 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭ ವಾನ್ ಡೆರ್ ಮರ್ವೆ ಎಸೆತದಲ್ಲಿ ಬೌಲ್ಡ್ ಆಗಿದ್ದು, ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಇದರಿಂದ ನಿರಾಶರಾದರು. ಪ್ರಸ್ತುತ ಶ್ರೇಯಸ್ ಐಯ್ಯರ್ 54 ರನ್ ಹಾಗೂ ರಾಹುಲ್ 10 ರನ್ ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಭಾರತ ತಂಡ 34 ಓವರ್ ಗಳಲ್ಲಿ 235 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದೆ.