WPL | ಆರ್ ಸಿ ಬಿ ಗೆ 108 ರ ಸವಾಲು ನೀಡಿದ ಜೈಂಟ್ಸ್
ಸೋಫಿ, ರೇಣುಕಾ ಸಿಂಗ್ ದಾಳಿಗೆ ಗುಜರಾತ್ ತತ್ತರ
Photo : x/@wplt20
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನ ರೋಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗುಜರಾಜ್ ಜೈಂಟ್ಸ್, ಆರ್ ಸಿ ಬಿ ಗೆ ಗೆಲ್ಲಲು 108 ರ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್ ಸಿ ಬಿ ತಂಡ ಜೈಂಟ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಕ್ರೀಸ್ ಗೆ ಆಗಮಿಸಿದ ಆರಂಭಿಕ ಬ್ಯಾಟರ್ ಗಳಾದ ತಂಡದ ನಾಯಕಿ ಬೆಥ್ ಮನಿ 7 ಎಸೆತದಲ್ಲಿ 2 ಬೌಂಡರಿ ಸಿಡಿಸಿ 8 ರನ್ ಗಳಿಸಿ ರಕ್ಷಣಾತ್ಮಕ ಆಟವಾಡಲು ಪ್ರಯತ್ನಿಸಿದರು. ಆದರೆ ಆರ್ ಸಿ ಬಿ ಬೌಲರ್ಗಳ ಸಂಘಟಿತ ದಾಳಿಯ ಮುಂದೆ ಅದು ನಡೆಯಲಿಲ್ಲ. ರೇಣುಕಾ ಸಿಂಗ್ ಅವರ ಎಸೆತದಲ್ಲಿ ಬೆಥ್ ಮನಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ದಾರಿ ಹಿಡಿದರು.
ತಂಡವು ಆಘಾತ ಅನುಭವಿಸುತ್ತಿರುವುದನ್ನು ಗ್ರಹಿಸಿದ ಹರ್ಲೀನ್ ಡಿಯೋಲ್ ರಕ್ಷಣಾತ್ಮಕ ಆಟವಾಡಿ 22 ರನ್ ಪೂರೈಸಿದ್ದರು. ರನ್ ಪೇರಿಸುವ ಪ್ರಯತ್ನದಲ್ಲಿ ರನೌಟಾದರು. ರೇಣುಕಾ ಸಿಂಗ್ ಅವರ ದಾಳಿಗೆ ಪೋಬೆ ಲಿಚ್ಫೀಲ್ಡ್ ಕೂಡ ಕೇವಲ 5 ರನ್ ಗಳಿಸಿ ರಿಚಾ ಘೋಶ್ ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಆ ಬಳಿಕ ಬಂದ ವೇದ ಕೃಷ್ಣಮೂರ್ತಿ 9 ರನ್ ,ಅಶ್ಲೆಗ್ ಗಾರ್ಡ್ನರ್ 7 ರನ್, ಕತ್ರೈನ್ಯೆಮ್ಮ ಬ್ರೈಸ್ 3 ರನ್ ಸ್ ಸ್ನೇಹಾ ರಾಣಾ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಗುಜರಾತ್ ಜೈಂಟ್ ಪರ ದಯಾಲನ್ ಹೇಮಲತಾ ತ್ರ 31 ರನ್ ಗಳಿಸುವ ಮೂಲಕ ಜವಾಬ್ಧಾರಿಯುತ ಆಟವಾಡಿ ತಂಡವನ್ನು ಪ್ರಯಾಸದಿಂದ 100ರ ಗಡಿ ದಾಟಿಸಿದರು.
ಆರ್ ಸಿ ಬಿ ಪರ ಸೋಫಿ 3 ವಿಕೆಟ್ ಪಡೆದರು. ರೇಣುಕಾ ಸಿಂಗ್ 2 ವಿಕೆಟ್ ಕಬಳಿಸಿದರು
TIMBER!
— Women's Premier League (WPL) (@wplt20) February 27, 2024
Wicket number 2⃣ for Sophie Molineux #GG 74/6 in the 17th over.
Match Centre https://t.co/wV0BEgckTA#TATAWPL | #RCBvGG pic.twitter.com/vmMbqbDl4B