WPL | ಆರ್ಸಿಬಿಯ ಎಲಿಸ್ ಪೆರ್ರಿ ಹೊಡೆತಕ್ಕೆ ಕಾರಿನ ಗಾಜು ಪುಡಿಪುಡಿ
Photo: X/@Dravidict
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ದ ಆರ್ಸಿಬಿ ಬ್ಯಾಟರ್ ಎಲಿಸ್ ಪೆರ್ರಿ ಸಿಡಿಸಿದ ಅಮೋಘ ಸಿಕ್ಸರ್ ಮೈದಾನದ ಸ್ಟಾಂಡ್ ನಲ್ಲಿ ಇಟ್ಟಿದ್ದ ಕಾರಿನ ಗಾಜನ್ನು ಜಖಂಗೊಳಿಸಿತು.
ಪಂದ್ಯದ 19 ಓವರ್ ಈ ಘಟನೆಗೆ ಸಾಕ್ಷಿಯಾಗಿದ್ದು, 19 ಓವರ್ ಬೌಲಿಂಗ್ ಮಾಡಲು ಬಂದ ದೀಪ್ತಿ ಶರ್ಮಾ ಆರ್ಸಿಬಿ ತಂಡಕ್ಕೆ 13 ರನ್ ಬಿಟ್ಟುಕೊಟ್ಟಿದ್ದರು. ಇದೇ ಓವರ್ನ ಮೊದಲೆರಡು ಎಸೆತದಲ್ಲಿ ಒಂದಂಕಿ ರನ್ ನೀಡಿದ್ದ ಶರ್ಮಾ, ಮೂರನೇ ಎಸೆತದಲ್ಲಿ ನಾಲ್ಕು ಹಾಗೂ 5 ನೇ ಎಸತದಲ್ಲಿ ಒಂದು ರನ್ ನೀಡಿ ತಂಡವನ್ನು ನಿಯಂತ್ರಿಸಿದ್ದರು. ಆದರೆ ಕೊನೆಯ 5 ನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಲಿಂಗ್ ಲಯ ಅರಿತ ಎಲಿಸ್ ಪೆರ್ರಿ ಮಿಡ್ ವಿಕೆಟ್ ಮೇಲೆ ಬಾರಿಸಿ ಕಾರಿನ ಗಾಜನ್ನು ಒಡೆದು ಹಾಕಿದರು. ಇದರಿಂದ ಸ್ಟೇಡಿಯಂ ನಲ್ಲಿ ನೆರೆದಿದ್ದ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಎಲ್ಲಿಸ್ ಪೆರ್ರಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಲ್ಲದೇ ತಂಡದ ಮೊತ್ತವನ್ನು 200ರ ಗಡಿಯ ಹತ್ತಿರಕ್ಕೆ ತಲುಪುವಂತೆ ಮಾಡಿದರು.