ಖ್ಯಾತ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ನಿಧನ
ರೇ ಮಿಸ್ಟೀರಿಯೊ ಸೀನಿಯರ್ (Photo credit: X)
ಅಮೆರಿಕ: ಖ್ಯಾತ ಮೆಕ್ಸಿಕನ್ ರೆಸ್ಲರ್ ರೇ ಮಿಸ್ಟೀರಿಯೊ ಸೀನಿಯರ್ ನಿಧನರಾಗಿರುವ ಬಗ್ಗೆ ಅವರ ಕುಟುಂಬ ವರ್ಗವು ದೃಢಪಡಿಸಿದೆ.
ಮಿಸ್ಟೀರಿಯೊ ಅವರ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್. ಮಿಸ್ಟೀರಿಯೊ ಸೀನಿಯರ್ ಎಂದೇ ಪ್ರಸಿದ್ದರಾಗಿದ್ದ ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್ ತನ್ನ 66ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಮರಣದ ಕುರಿತು ಮಾಹಿತಿಯನ್ನು ಲುಚಾ ಲಿಬ್ರೆ AAA ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಅವರ ಕುಟುಂಬಕ್ಕೆ ಸಂತಾಪವನ್ನು ಸೂಚಿಸಿದೆ.
1976ರಲ್ಲಿ ರೇ ಮಿಸ್ಟೀರಿಯೊ ಸೀನಿಯರ್ ಅವರು ಕುಸ್ತಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ ಮತ್ತು ಉದ್ಯಮದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಅವರು 2009ರಲ್ಲಿ ಅಧಿಕೃತವಾಗಿ ಕುಸ್ತಿ ವೃತ್ತಿಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದರು.
WWE ಸೂಪರ್ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಸಂಬಂಧಿಯಾಗಿರುವ (ಚಿಕ್ಕಪ್ಪ) ರೇ ಮಿಸ್ಟೀರಿಯೊ 2023ರಲ್ಲಿ ಏರೋ ಸ್ಟಾರ್ ಜೊತೆಗಿನ ಜಾಗತಿಕ ಲುಚಾ ಲಿಬ್ರೆ ಪಂದ್ಯದಲ್ಲಿ ಹೆರೆಜೆ, ಹಿಜೊ ಡಿ ಪಿರಾಟಾ ಮೋರ್ಗಾನ್ ಮತ್ತು ನೈಟ್ಮೇರ್ ಅಜ್ಟೆಕಾ ಅವರನ್ನು ಸೋಲಿಸಿದ್ದರು. ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಲುಚಾ ಲಿಬ್ರೆ AAA ವರ್ಲ್ಡ್ವೈಡ್ನಂತಹ ಪ್ರಮುಖ ಸಂಸ್ಥೆ ಆಯೋಜಿಸುವ ಕುಸ್ತಿ ಪಂದ್ಯಗಳಲ್ಲಿ ಇವರು ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದಲ್ಲಿ WWE ಸಮಾನವೆಂದು ಪರಿಗಣಿಸಲಾಗುತ್ತದೆ.