3523 ಕೋಟಿ ರೂ. ಪೂರಕ ಅಂದಾಜು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ: 2023-24ನೇ ಸಾಲಿನಲ್ಲಿ 3523 ಕೋಟಿ ರೂ.ಗಳ ಪೂರಕ ಅಂದಾಜುಗಳ ಮೊದಲನೆ ಕಂತಿನ ಬೇಡಿಕೆಗಳ ಪ್ರಸ್ತಾವಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಕೃಷಿ ತೋಟಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 124 ಕೋಟಿ ರೂ., ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 32.73 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 22 ಕೋಟಿ ರೂ., ಆರ್ಥಿಕ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 18.73 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 4 ಕೋಟಿ ರೂ., ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 63.32 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 9.10 ಕೋಟಿ ರೂ.ಗಳಿಗೆ ಮೀರದ ಇನ್ನೂ ಹೆಚ್ಚಿನ ಮೊಬಲಗನ್ನು ಸರಕಾರಕ್ಕೆ ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.
ಒಳಾಡಳಿತ ಮತ್ತು ಸಾರಿಗೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1.50 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 16.17 ಲಕ್ಷ ರೂ., ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 46 ಕೋಟಿ ರೂ., ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 202.86 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 131.98 ಕೋಟಿ ರೂ., ಅರಣ್ಯ, ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 12.01 ಕೋಟಿ ರೂ.ಗಳಿಗೆ ಮೀರದ ಮೊಬಗಲನ್ನು ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.
ಸಹಕಾರ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 259 ಕೋಟಿ ರೂ., ಸಮಾಜ ಕಲ್ಯಾಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 395.22 ಕೋಟಿ ರೂ. ಮತ್ತು ಬಂಡವಾಳ ಲೆಕ್ಕದಲ್ಲಿ 175 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 610.70 ಕೋಟಿ ರೂ., ವಾರ್ತಾ, ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳು ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 5.60 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 2 ಕೋಟಿ ರೂ.ಗಳನ್ನು ಮೀರದ ಮೊಬಲಗನ್ನು ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 297.46 ಕೋಟಿ ರೂ., ಕಂದಾಯ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 584.10 ಕೋಟಿ ರೂ., ಶಿಕ್ಷಣ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 56.43 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 30.73 ಕೋಟಿ ರೂ., ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 14.45 ಕೋಟಿ ರೂ., ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 18.30 ಕೋಟಿ ರೂ., ಬಂಡವಾಳ ಲೆಕ್ಕದಲ್ಲಿ 56 ಕೋಟಿ ರೂ.ಗಳನ್ನು ಮೀರದ ಮೊಬಲಗನ್ನು ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.
ಲೋಕೋಪಯೋಗಿ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 150 ಕೋಟಿ ರೂ., ನೀರಾವರಿ ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 1 ಲಕ್ಷ ರೂ., ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 12.32 ಕೋಟಿ ರೂ., ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಗೆ 127.32 ಕೋಟಿ ರೂ.ಗಳನ್ನು ರಾಜಸ್ವ ಲೆಕ್ಕದಲ್ಲಿ ಹಾಗೂ 20 ಕೋಟಿ ರೂ.ಗಳನ್ನು ಬಂಡವಾಳ ಲೆಕ್ಕದಲ್ಲಿ ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.
ಇಂಧನ ಇಲಾಖೆಗೆ ಬಂಡವಾಳ ಲೆಕ್ಕದಲ್ಲಿ 8.97 ಕೋಟಿ ರೂ., ಕನ್ನಡ ಮತ್ತು ಸಂಸ್ಕತಿ ಇಲಾಖೆಗೆ 18.16 ಕೋಟಿ ರೂ.ಗಳನ್ನು ರಾಜಸ್ವ ಲೆಕ್ಕದಲ್ಲಿ ಹಾಗೂ ಕಾನೂನು ಇಲಾಖೆಗೆ ರಾಜಸ್ವ ಲೆಕ್ಕದಲ್ಲಿ 13.42 ಕೋಟಿ ರೂ.ಗಳಿಗೆ ಮೀರದ ಮೊಬಲಗನ್ನು ಸರಕಾರಕ್ಕೆ ಮಂಜೂರು ಮಾಡಬೇಕೆಂದು ಪ್ರಸ್ತಾಪಿಸಲಾಗಿದೆ.