ಆರ್ಥಿಕ ಸಲಹೆಗಾರ ಒಂದು ಜವಾಬ್ದಾರಿ, ವೇತನ ಮುಟ್ಟಲ್ಲ: ಬಸವರಾಜ ರಾಯರೆಡ್ಡಿ
ಬೆಂಗಳೂರು: ‘ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಎನ್ನುವುದು ದೊಡ್ಡ ಜವಾಬ್ದಾರಿಯಾಗಿದೆ. ಹಾಗಾಗಿ, ಸರಕಾರದಿಂದ ಯಾವುದೇ ವೇತನ ಮುಟ್ಟುವುದಿಲ್ಲ’ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಘೋಷಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಶಮನ ಮಾಡುವ ಉದ್ದೇಶದಿಂದ ನನಗೆ ಆರ್ಥಿಕ ಸಲಹೆಗಾರ ಹುದ್ದೆ ನೀಡಿದ್ದಾರೆಂದು ಅನಿಸುವುದಿಲ್ಲ. ಯಾಕೆಂದರೆ, ನನಗೆ ಯಾವುದೇ ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದರು.
ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡುವುದು ಬಿಡಬೇಕು. ಈ ಬಗ್ಗೆ ಕುಮಾರಸ್ವಾಮಿ ಕೂರಲಿ, ಚರ್ಚೆ ಮಾಡಲಿ. ಪ್ರತಿಯೊಬ್ಬರಿಗೂ ಅವರದೇ ಆದ ನೈಪುಣ್ಯತೆ ಇರುತ್ತದೆ. ಹಾಗೆಲ್ಲ ಹಗುರವಾಗಿ ಮಾತಾಡಬಾರದು ಎಂದ ಅವರು, ನನ್ನ ಮಟ್ಟಿಗೆ ಇದೊಂದು ಉದ್ಯೋಗವಲ್ಲ. ನಾನು ಶಾಸಕನಾದಾಗಲೂ ವೇತನ ತೆಗೆದುಕೊಂಡಿಲ್ಲ. ಈಗಲೂ ವೇತನ ತೆಗೆದುಕೊಳ್ಳಲ್ಲ ಎಂದರು.
Next Story