ಬೆಂಗಳೂರು ಹೆಚ್ಎಎಲ್ ಏರ್ಪೋರ್ಟ್ನಲ್ಲಿ ವಿಮಾನ ತುರ್ತು ಭೂಸ್ಪರ್ಶ
Photo -indiatoday.in
ಬೆಂಗಳೂರು, ಜು.12: ನಗರದ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ಪ್ಲೈ ಬೈ ವೈರ್ ಪ್ರೀಮಿಯರ್ 1 ಎ ಎಂಬ ವಿಮಾನವು ತುರ್ತು ಭೂಸ್ಪರ್ಶ ಮಾಡಿದ್ದು, ನೆಲಕ್ಕೆ ಮುಗ್ಗರಿಸಿದೆ. ಯಾವುದೇ ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ.
ವಿಮಾನವು ನೋಸ್ ಲ್ಯಾಂಡಿಂಗ್ ಗೇರ್ ಮಾಡಲಾಗದೆ ಏರ್ಟರ್ನ್ಬ್ಯಾಕ್(ನೆಲಕ್ಕೆ ಮುಗ್ಗರಿಸಿದ ಸ್ಥಿತಿ) ಆಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್ಗಳಿದ್ದರು ಮತ್ತು ಯಾವುದೇ ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ ಎಂದು ಡೈರೆಕ್ಟರೆಟ್ ಜನರಲ್ ಆಫ್ ಸಿವಿಲ್ ಏವಿಯೇಷನ್(ಡಿಜಿಸಿಎ) ತಿಳಿಸಿದೆ.
ಡಿಜಿಸಿಎ ಘಟನೆಯ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋದಲ್ಲಿ ವಿಮಾನವು ರನ್ವೇಯಲ್ಲಿ ಸುರಕ್ಷಿತವಾಗಿ ಇಳಿಯುವುದನ್ನು ತೋರಿಸಿದೆ. ಟೇಕ್-ಆಫ್ ಸಮಯದ ನಂತರ ತುರ್ತು ಪರಿಸ್ಥಿತಿಯು ‘ಏರ್ಟರ್ನ್ ಬ್ಯಾಕ್'ಗೆ ಕಾರಣವಾಗಿದೆ, ಇದು ಸಾಮಾನ್ಯವಾಗಿ ಎಂಜಿನ್ ವೈಫಲ್ಯವಾಗಿರುತ್ತದೆ ಎಂದು ತಿಳಿದು ಬಂದಿದೆ.
Next Story