ಅತ್ತಿಬೆಲೆ ಪಟಾಕಿ ದುರಂತ: ಸಿಐಡಿ ತನಿಖೆ ಆರಂಭ
ಆನೇಕಲ್, ಅ.9: ಅತ್ತಿಬೆಲೆಯಲ್ಲಿ ಶನಿವಾರ ಸಂಭವಿಸಿದ ಪಟಾಕಿ ಸ್ಫೋಟ ದುರಂತದ ತನಿಖೆಯನ್ನು ಸಿಐಡಿ ಆರಂಭಿಸಿದೆ.
ಹದಿನಾಲ್ಕು ಮಂದಿಯ ಸಜೀವ ದಹನಕ್ಕೆ ಕಾರಣವಾದ ಈ ಸ್ಫೋಟ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವಿವಾರ ಆದೇಶಿಸಿದ್ದರು. ಅದರ ಬೆನ್ನಲ್ಲೇ ಇದೀಗ ಅತ್ತಿಬೆಲೆ ಪೊಲೀಸ್ ಠಾಣೆಗೆ ಸಿಐಡಿ ಐಜಿ ಪ್ರವೀಣ್ ಮಧುಕರ್ ಪವಾರ್ ಸಮೇತ ತಂಡ ಭೇಟಿ ಆಗಮಿಸಿದೆ.
ಈಗಾಗಲೇ ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಶ್ರೀನಿವಾಸ್, ಮೂವರು ಇನ್ ಸ್ಪೆಕ್ಟರ್ ಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಪಟಾಕಿ ಅಂಗಡಿ ಪರವಾನಿಗೆ ಹೊಂದಿರುವ ರಾಮಸ್ವಾಮಿರೆಡ್ಡಿಯಿಂದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದಾರೆ.
Next Story