ಮೈಸೂರು ದಸರಾಕ್ಕೆ ಆಕರ್ಷಕ ಲೋಗೋ, ನೆಚ್ಚಿನ ತಾಣದ ಬಗ್ಗೆ ಬರಹ ಸ್ಪರ್ಧೆ: ವಿಜೇತರಿಗೆ ಸಿಗಲಿದೆ ನಗದು ಬಹುಮಾನ
ಮೈಸೂರು,ಆ.14: ವಿಶ್ವವಿಖ್ಯಾತ ಮೈಸೂರು ದಸರಾ 2023 ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿದೆ.
ನಗರದ ಜಿಲ್ಲಾ ಪಂಚಾಯತ್ ನ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಸೋಮವಾರ ಸಚಿವರು,ಶಾಸಕರು,ವಿಧಾನಪರಿಷತ್ ಸದಸ್ಯರು ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದರು. ಆಕರ್ಷಕ ಲೋಗೋ, ಒಂದು ಸಾಲುನುಡಿ, ಶುಭ ಸಂದೇಶ, ಮೈಸೂರಿನ ನೆಚ್ಚಿನ ತಾಣದ ಬಗ್ಗೆ ಬರಹ ಸ್ಪರ್ಧೆಯ ವಿಷಯವಾಗಿದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಹುಮಾನ ನೀಡಲಾಗುತ್ತದೆ.
ಮೊದಲ ಬಹುಮಾನ 30 ಸಾವಿರ ನಗದು,ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 05 ಸಾವಿರ ರೂ. ನಿಗದಿ ಮಾಡಲಾಗಿದೆ. ನೋಂದಣಿಗೆ ಕೊನೆ ದಿನಾಂಕ 31/08/2023. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/09/2023.
ಈ ವೇಳೆ ಸಚಿವರುಗಳಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಮೈಸೂರು ಮೇಯರ್ ಶಿವಕುಮಾರ್, ಶಾಸಕರುಗಳಾದ ಜಿ.ಟಿ.ದೇವೇಗೌಡ, ಕೆ.ಹರೀಶ್ ಗೌಡ, ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ಸದಸ್ಯರುಗಳಾದ ಎಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲಿಸ್ ಆಯುಕ್ತ ಬಿ.ರಮೇಶ್ ಬಾನೋತ್, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬ್ರಾಂಡಿಂಗ್ ಮೈಸೂರು ಸ್ಪರ್ಧೆಯ ನಮೂನೆ ಅನಾವರಣ