ಬೆಂಗಳೂರು: ಮೇಘನಾ ಫುಡ್ಸ್ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ
ಬೆಂಗಳೂರು: ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಮೇಘನಾ ಫುಡ್ಸ್ ಕಂಪನಿಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಕಡೆ ಇದೀಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಆದಾಯ ತೆರಿಗೆ ಪಾವತಿಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸದ್ಯ ಐಟಿ ಅಧಿಕಾರಿಗಳು ದಾಳಿ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿ ಹೆಚ್ಚು ಹೆಸರುವಾಸಿಯಾದ ಮೇಘನಾ ಫುಡ್ಸ್, ತನ್ನ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ಬೆಂಗಳೂರಿನ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಶಾಖೆಗಳನ್ನು ನಡೆಸುತ್ತಿವೆ.
ಐ ಟಿ ಅಧಿಕಾರಿಗಳು ಕರ್ನಾಟಕ ಮತ್ತು ಗೋವಾ ವಿಭಾಗದಿಂದ ಆಗಮಿಸಿದ್ದಾರೆ ಎನ್ನಲಾಗಿದೆ.
Next Story