ಸಿ.ಟಿ. ರವಿ ಹಕ್ಕಿಗೆ ಚ್ಯುತಿ ಆಗದಂತೆ ಕ್ರಮ : ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ
ಬೆಂಗಳೂರು : ಸಿ.ಟಿ.ರವಿ ಮೇಲ್ಮನೆ ಸದಸ್ಯ ಹಿನ್ನೆಲೆ ಕಾನೂನು ಬದ್ಧವಾಗಿ ಅವರ ಹಕ್ಕಿಗೆ ಯಾವುದೇ ಚ್ಯುತಿ ಆಗದಂತೆ ಕ್ರಮ ವಹಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ಕುರಿತು ಮಾನಹಾನಿ ಪದ ಬಳಕೆ ಆರೋಪ ಪ್ರಕರಣದ ದಿನದಂದು ಪೊಲೀಸರು ಸುವರ್ಣವಿಧಾನಸೌಧದಲ್ಲಿಯೇ ಧರಣಿ ಮಾಡುತ್ತಿರುವ ವೇಳೆ ನನ್ನನ್ನು ವಶಕ್ಕೆ ಪಡೆದು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಹೀಗಾಗಿ ಈ ರೀತಿ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಸಿ.ಟಿ.ರವಿ ಏಳು ಪುಟಗಳ ಪತ್ರ ಬರೆದಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನೂ, ಈ ಪ್ರಕರಣ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಯಾವುದೇ ಪತ್ರ ಬಂದಿಲ್ಲ. ಮಾಧ್ಯಮಗಳಲ್ಲಿ ಅವರ ಹೇಳಿಕೆ ಗಮನಿಸಿದ್ದೇವೆ. ಹೆಣ್ಣುಮಕ್ಕಳಿಗೆ ಗೌರವ ನೀಡುವುದು ನಮ್ಮ ಧರ್ಮ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನ್ನ ಮಗಳ ರೀತಿ ಎಂದು ತಿಳಿದುಕೊಂಡಿದ್ದೇನೆ ಎಂದು ಅವರು ನುಡಿದರು.