ಬೆಂಗಳೂರು: ಬಿಎಂಟಿಸಿ ಡಿಪೋದಲ್ಲಿ ನೌಕರರನ್ನು ಭೇಟಿಯಾದ ನಟ ರಜನಿಕಾಂತ್
ಬೆಂಗಳೂರು: 'ಜೈಲರ್' ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ನಟ ರಜನಿಕಾಂತ್ ದೇಶದ ವಿವಿಧ ರಾಜ್ಯಗಳಿಗೆ ಪ್ರವಾಸ ಮಾಡುತ್ತಿದ್ದಾರೆ.
ಇಂದು ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ರಜನಿಕಾಂತ್ ಸೀತಾಪತಿ ಅಗ್ರಹಾರ ಶ್ರೀ ರಾಘವೇಂದ್ರ ಮಠಕ್ಕೆ ತೆರಳಿ ರಾಯರ ದರ್ಶನ ಪಡೆದರು.
ಚಿತ್ರರಂಗ ಪ್ರವೇಶಿಸುವ ಮುನ್ನ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವರು, ಸೀತಾಪತಿ ಅಗ್ರಹಾರದಲ್ಲಿ ರಾಯರ ದರ್ಶನ ಬಳಿಕ ಜಯನಗದರ ಬಿಎಂಟಿಸಿ ಡಿಪೋ 4ಕ್ಕೆ ಭೇಟಿ ಭೇಟಿ ನೀಡಿ ನೌಕರರೊಡನೆ ಕೆಲ ಕಾಲ ಕುಶಲೋಪರಿ ನಡೆಸಿದರು.
ಈ ವೇಳೆ ಅಲ್ಲಿದ್ದ ನೌಕರರು ರಜನಿಕಾಂತ್ ಜೊತೆ ಸೆಲ್ಫಿ ತೆಗೆದು ಸಂಭ್ರಮಿಸಿದರು.
Next Story