ಬೆಂಗಳೂರು: 'ರಾಜ - ಮಹಾರಾಜ' ಜೋಡುಕರೆ ಕಂಬಳಕ್ಕೆ ಸಂಭ್ರಮದ ತೆರೆ: ಫಲಿತಾಂಶದ ವಿವರ ಇಲ್ಲಿದೆ
ಬೆಂಗಳೂರು, ನ.27: ರಾಜಧಾನಿಯ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದ 'ರಾಜ - ಮಹಾರಾಜ' ಜೋಡುಕರೆ ಕಂಬಳ ಕೂಟ ರವಿವಾರ ರಾತ್ರಿ ವಿದ್ಯುಕ್ತವಾಗಿ ತೆರೆ ಕಂಡಿದೆ. ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಅಡ್ಡಹಲಗೆ ಕಂಬಳ, ಕನಹಲಗೆಯ ಕಂಬಳ ಹೀಗೆ ಹಲವು ವಿಭಾಗಗಳಲ್ಲಿ ಕೋಣಗಳು ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿವೆ.
ಕೂಟದಲ್ಲಿ ಒಟ್ಟು 159 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆಹಲಗೆ ವಿಭಾಗದಲ್ಲಿ 7 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 6 ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 21 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 32 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 31 ಜೊತೆ ಹಾಗೂ ನೇಗಿಲು ಕಿರಿಯ ವಿಭಾಗದಲ್ಲಿ 62 ಜೊತೆ ಕೋಣಗಳು ಸ್ಪರ್ಧಿಸಿದ್ದವು.
ಸ್ಪರ್ಧೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಅವುಗಳ ವಿವರ ಇಂತಿವೆ.
ಕನೆಹಲಗೆ:
( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ )
ಬೊಳ್ಳಂಬಳ್ಳಿ ಚೈತ್ರ ಪರಮೇಶ್ವರ ಭಟ್ 'ಬಿ'
ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್
••••••••••••••••••••••••••••••••••••••••••••••
ಅಡ್ಡ ಹಲಗೆ:
ಪ್ರಥಮ: ಎಸ್. ಎಂ.ಎಸ್. ಫ್ಯಾಮಿಲಿ ಬೆಂಗಳೂರು
ಹಲಗೆ ಮುಟ್ಟಿದವರು: ಭಟ್ಕಳ ಹರೀಶ್
ದ್ವಿತೀಯ: ಬೋಳಾರ ತ್ರಿಶಾಲ್ ಕೆ. ಪೂಜಾರಿ
ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ
••••••••••••••••••••••••••••••••••••••••••••••
ಹಗ್ಗ ಹಿರಿಯ:
ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ 'ಸಿ'
ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ
ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ್
••••••••••••••••••••••••••••••••••••••••••••••
ಹಗ್ಗ ಕಿರಿಯ:
ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ
ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್
ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ 'ಎ'
ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್
••••••••••••••••••••••••••••••••••••••••••••••
ನೇಗಿಲು ಹಿರಿಯ:
ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆ ಕುಡಿಯ
ಓಡಿಸಿದವರು: ಸರಪಾಡಿ ಧನಂಜಯ ಗೌಡ
ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ. ಶೆಟ್ಟಿ
ಓಡಿಸಿದವರು: ಪಟ್ಟೆ ಗುರುಚರಣ್
••••••••••••••••••••••••••••••••••••••••••••••
ನೇಗಿಲು ಕಿರಿಯ:
ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ
ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ
ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ
ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ.